ಶಂಕರ್ ಮಹಾದೇವನ್: ಶಂಕರ್-ಎಹ್ಸಾನ್-ಲಾಯ್-ರಾಗಿ, ನಾವು ಮೂವರು, ಕಳೆದ ಇಪ್ಪತ್ಮೂರು ವರ್ಷಗಳಿಂದ ಸಂಗೀತ ಸಂಯೋಜನೆಯನ್ನು ಮಾಡುತ್ತಿದ್ದೇವೆ. ಸಂಖ್ಯೆ ಮೂರರ ಪರಿಕಲ್ಪನೆ ನನಗೆ ಯಾವಾಗಲೂ ಕುತೂಹಲವನ್ನುಂಟುಮಾಡುತ್ತದೆ.  ಮೂರರ ಒಡನಾಟವನ್ನು ನಾನು ಹಲವಾರು ವಿಷಯಾಂಶಗಳಲ್ಲಿ ನೋಡುತ್ತೇನೆ - ನ್ಯೂಟ್ರಾನ್-ಪ್ರೋಟಾನ್-ಎಲೆಕ್ಟ್ರಾನ್ ಆಗಿರಬಹುದು, ಬ್ರಹ್ಮ-ವಿಷ್ಣು-ಶಿವ ಆಗಿರಬಹುದು. ಈ ಮೂರರ ಪ್ರಸ್ತುತತೆ, ಮಹತ್ವ ಮತ್ತು ಪ್ರಭಾವವೇನು?

ಸದ್ಗುರು: ನಮಸ್ಕಾರ, ತ್ರಿಮೂರ್ತಿಗಳಾದ ಶಂಕರ್, ಎಹ್ಸಾನ್, ಲಾಯ್ರವರಿಗೆ! ಹೌದು, ನಮ್ಮಲ್ಲಿ ತ್ರಿಮೂರ್ತಿ, ತ್ರಿನೇತ್ರ, ತ್ರಿಶೂಲ, ತ್ರಿಕಾಲ ಎಲ್ಲವೂ ಇವೆ - ಇವೆಲ್ಲವೂ ಮನುಷ್ಯ ಜೀವನದ ಮೂಲಭೂತ ಅನುಭವದಿಂದಾಗಿ ಬೆಳೆದು ಬ೦ದ ವಿಚಾರಗಳಾಗಿವೆ.

ಭೂತ ಮತ್ತು ಭವಿಷ್ಯ ವಾಸ್ತವವಾಗಿ ಇರುವುದ ಈ ಕ್ಷಣದಲ್ಲೆ. ಏಕೆ೦ದರೆ, ಈ ಕ್ಷಣದಲ್ಲಷ್ಟೆ ನೀವು ನೆನಪಿಸಿಕೊಳ್ಳಲು ಮತ್ತು ಕಲ್ಪನೆ ಮಾಡಿಕೊಳ್ಳಲು ಸಾಧ್ಯವಾಗುವುದು.

ಮೂಲತಃ, ಮಾನವರ ಜೀವನಾನುಭೂತಿ ಉ೦ಟಾಗುವುದು ನೆನಪು, ಅನುಭವ ಮತ್ತು ಕಲ್ಪನೆಗಳ ನಡುವೆ – ನಮ್ಮ ನೆನಪು ನಡೆದುಹೋದ ಅಥವಾ ಭೂತಕಾಲಕ್ಕೆ ಸೇರಿರುವುದಾಗಿದೆ; ನಮ್ಮ ಅನುಭವ ಯಾವಾಗಲೂ ಪ್ರಸ್ತುತ ಅಥವಾ ವರ್ತಮಾನ ಕಾಲಕ್ಕೆ ಸೇರಿರುವುದಾಗಿದೆ; ಮತ್ತು ನಮ್ಮ ಕಲ್ಪನೆ ಹಾಗೂ ಆಕಾಂಕ್ಷೆಗಳು ಮು೦ಬರಲಿರುವ ಅಥವಾ ಭವಿಷ್ಯತ್ಕಾಲಕ್ಕೆ ಸೇರಿರುತ್ತವೆ. ಈ ಮೂರು ರೀತಿಯ ಅನುಭವಗಳಿಂದ ಹೊರಹೊಮ್ಮುವ ಹಲವಾರು ಅಂಶಗಳನ್ನು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ “ತ್ರಿ” ಎಂದು ನೆಲೆಯೂರಿಸಲಾಗಿದೆ – ತ್ರಿನೇತ್ರ, ತ್ರಿಕಾಲ, ತ್ರಿಶೂಲ ಮತ್ತು ನೀವುಗಳು, ತ್ರಿಮೂರ್ತಿಗಳು.

ಆದರೆ, ಈ ಮೂರೂ ಆಯಾಮಗಳು ಇರುವುದು ವರ್ತಮಾನದಲ್ಲೇ ಎಂಬ ಮೂಲಭೂತ ಸಂಗತಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕು.  ಭೂತ ಮತ್ತು ಭವಿಷ್ಯ ವಾಸ್ತವವಾಗಿ ಇರುವುದ ಈ ಕ್ಷಣದಲ್ಲೆ. ಏಕೆ೦ದರೆ, ಈ ಕ್ಷಣದಲ್ಲಷ್ಟೆ ನೀವು ನೆನಪಿಸಿಕೊಳ್ಳಲು ಮತ್ತು ಕಲ್ಪನೆ ಮಾಡಿಕೊಳ್ಳಲು ಸಾಧ್ಯವಾಗುವುದು. 

ಜನರು “ಈ ಕ್ಷಣದಲ್ಲೇ ಇರಿ” ಎಂದು ಹೇಳಲು ಕಾರಣವೆ೦ದರೆ – ಅವರು ನರಳುತ್ತಿರುವುದು ಜೀವನದಿ೦ದಲ್ಲ, ಬದಲಾಗಿ ಅವರಲ್ಲಿನ ಎರಡು ಅತ್ಯದ್ಭುತವಾದ ಶಕ್ತಿಗಳಾದ, ನೆನಪು ಮತ್ತು ಕಲ್ಪನೆಗಳಿ೦ದಾಗುವ ಬಾಧೆಗಳಿ೦ದ.

ಈ ಬಗ್ಗೆ ಜಗತ್ತಿನಲ್ಲಿ ಬಹಳ ಬೋಧನೆಗಳು ಹರಿದಾಡುತ್ತಿವೆ. ವಿಶೇಷವಾಗಿ ಅಮೇರಿಕದಲ್ಲಿ. ಭಾರತದ ಪಶ್ಚಿಮ ಕರಾವಳಿಗೂ ಅದರ ಪ್ರಭಾವ ತಟ್ಟಿದೆ ಎಂದೆನಿಸುತ್ತಿದೆ. ಜನರು "ಈ ಕ್ಷಣದಲ್ಲಿಯೇ ಇರಿ" ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಇವರುಗಳು ವರ್ತಮಾನವನ್ನು ಆರಾಧಿಸುವ ಜನರು! ಆದರೆ, ಈ ಕ್ಷಣದಲ್ಲಿಯೇ ಇರಿ ಎಂದು ಏತಕ್ಕಾಗಿ ಹೇಳುತ್ತಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ – ಏಕೆ೦ದರೆ ನಿಮಗೆ ಬೇರೆಲ್ಲೂ ಇರಲು ಸಾಧ್ಯವಿಲ್ಲ. ಈ ಕ್ಷಣದಲ್ಲಲ್ಲದೆ ಬೇರೆ ಎಲ್ಲಿಯಾದರೂ ಇರಲು ಸಾಧ್ಯವೆ? ನಾವು ಹೇಗಿದ್ದರೂ ವರ್ತಮಾನದಲ್ಲೇ ಬೇರೂರಿರುವುದು.

ಇವರುಗಳು ಹೇಳುತ್ತಿರುವುದೇನೆಂದರೆ, “ಕಳೆದು ಹೋಗಿರುವುದರ ಬಗ್ಗೆ ಯೋಚಿಸಬೇಡಿ, ಭವಿಷ್ಯದ ಬಗ್ಗೆ ಯೋಚಿಸಬೇಡಿ” ಎಂದು. ನಮ್ಮ ಮೆದುಳಿನ ಸಾಮರ್ಥ್ಯವನ್ನು ಈ ಮಟ್ಟಕ್ಕೆ ತರಲು, ಸ್ಫುಟವಾದ ಜ್ಞಾಪಕಶಕ್ತಿ ಮತ್ತು ಅದ್ಭುತವಾದ ಕಲ್ಪನಾಶಕ್ತಿಯನ್ನು ಹೊ೦ದಲು ಲಕ್ಷಾಂತರ ವರ್ಷಗಳು ಹಿಡಿದಿದೆ. ಆದರೆ, ಇಂದು ಯಾರೋ ಇದನ್ನೆಲ್ಲ ಕಸದ ಬುಟ್ಟಿಗೆ ಎಸೆದು, ಎರೆಹುಳುವಿನ ತರಹ ಬದುಕೋಣ ಎಂದೆನ್ನುತ್ತಿದ್ದಾರೆ. ನನಗೆ ಎರೆಹುಳುವಿನ ಮೇಲೇನೂ ದ್ವೇಷವಿಲ್ಲ, ಅದೊಂದು ಬಹಳ ಪರಿಸರ ಸ್ನೇಹಿ ಜೀವಿ. ಆದರೆ ನಮ್ಮ ಮೆದುಳಿನ ಸಾಮರ್ಥ್ಯವನ್ನು ಈ ಮಟ್ಟಕ್ಕೆ ತರಲು ನಮ್ಮ ಮೇಲಾದ ಇಷ್ಟೆಲ್ಲಾ ವಿಕಸನ ಪ್ರಕ್ರಿಯೆಯನ್ನು ಯಾವುದೋ ಒಂದು ಗೊಡ್ಡು ಸಿದ್ಧಾಂತಕ್ಕೆ ಬಿಟ್ಟುಕೊಡಬಾರದು.

ಜನರು “ಈ ಕ್ಷಣದಲ್ಲೇ ಇರಿ” ಎಂದು ಹೇಳಲು ಕಾರಣವೆ೦ದರೆ – ಅವರು ನರಳುತ್ತಿರುವುದು ಜೀವನದಿ೦ದಲ್ಲ, ಬದಲಾಗಿ ಅವರಲ್ಲಿನ ಎರಡು ಅತ್ಯದ್ಭುತವಾದ ಶಕ್ತಿಗಳಾದ, ನೆನಪು ಮತ್ತು ಕಲ್ಪನೆಗಳಿ೦ದಾಗುವ ಬಾಧೆಗಳಿ೦ದ. ಜನರ ಸಂಕಟದ ಮೂಲವೆಂದರೆ ಇದು - ಅವರು ಹತ್ತು ವರ್ಷಗಳ ಹಿಂದೆ ನಡೆದ ಸಂಗತಿಗಳಿ೦ದ ಇನ್ನೂ ಸಹ ನೋವನ್ನು ಅನುಭವಿಸಬಹುದು ಮತ್ತು ನಾಡಿದ್ದು ಏನಾಗಬಹುದು ಎನ್ನುವುದರಿ೦ದ ಈಗಾಗಲೇ ದುಃಖವನ್ನು ತ೦ದುಕೊಳ್ಳಬಹುದು. 

 

ತಮ್ಮ ಚಿಂತನೆ ಮತ್ತೆ ಭಾವನೆಗಳನ್ನು ಹೇಗೆ ನಿಭಾಯಿಸಬೇಕೆಂದು ಜನಗಳಿಗೆ ಗೊತ್ತಿಲ್ಲದ ಕಾರಣ, ಅವರು ಈ ನೆನಪು ಮತ್ತು ಕಲ್ಪನೆಯ ಸಾಮರ್ಥ್ಯಗಳನ್ನು ಬಿಟ್ಟುಕೊಡಲು ಬಯಸುತ್ತಿದ್ದಾರೆ. ನೀವು ಒ೦ದುವೇಳೆ ಸಂತೋಷದಿಂದ ನೆನಪಿಸಿಕೊಳ್ಳಬಹುದಾದರೆ, ಮತ್ತು ಉತ್ಸಾಹ-ಆನಂದದೊ೦ದಿಗೆ ಕಲ್ಪನೆ ಮಾಡಿಕೊಳ್ಳಬಹುದಾದರೆ, ಅದನ್ನು  ಬಿಟ್ಟುಕೊಡಲು ಏಕೆ ನೋಡುವಿರಿ? ನಿಮ್ಮ ನೆನಪುಗಳು ಮತ್ತು ನಿಮ್ಮ ಕಲ್ಪನೆಗಳು ಕೇವಲ ಅನಿಯಂತ್ರಿತವಾಗಿರುವುದರಿಂದ, ದುಃಖದ ಒಂದು ಕೂಪವನ್ನೇ ಅವುಗಳು ಸೃಷ್ಟಿಸುತ್ತಿವೆ. ಆದ್ದರಿಂದ, ನಡೆದು ಹೋಗಿರುವುದನ್ನು ಮರೆಯುವುದರ ಬಗ್ಗೆ ಮತ್ತು ನಾಳೆ ನಡೆಯುವುದರ ಬಗ್ಗೆ ಯೋಚನೆ ಮಾಡದಿರುವ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ಮನುಷ್ಯ ಜೀವನವನ್ನು ನಡೆಸಬೇಕಾಗಿರುವುದು ಈ ರೀತಿಯಲ್ಲಲ್ಲ. 

ನಿಮ್ಮ ನೆನಪುಗಳು ಮತ್ತು ನಿಮ್ಮ ಕಲ್ಪನೆಗಳು ಕೇವಲ ಅನಿಯಂತ್ರಿತವಾಗಿರುವುದರಿಂದ, ದುಃಖದ ಒಂದು ಕೂಪವನ್ನೇ ಅವುಗಳು ಸೃಷ್ಟಿಸುತ್ತಿವೆ. ಆದ್ದರಿಂದ, ನಡೆದು ಹೋಗಿರುವುದನ್ನು ಮರೆಯುವುದರ ಬಗ್ಗೆ ಮತ್ತು ನಾಳೆ ನಡೆಯುವುದರ ಬಗ್ಗೆ ಯೋಚನೆ ಮಾಡದಿರುವ ಬಗ್ಗೆ ಜನರು ಮಾತನಾಡುತ್ತಿದ್ದಾರೆ.

ತ್ರಿಕಾಲ, ತ್ರಿಶೂಲ ಮತ್ತು ತ್ರಿನೇತ್ರ – ಈ ಮೂರೂ ಆಯಾಮಗಳಿರುವುದು ತು೦ಬಾ ಮುಖ್ಯ. ಇವುಗಳು ಜೀವನವನ್ನು ನೋಡುವ ಮತ್ತು ಅನುಭವಿಸುವ ಮೂರು ಆಯಾಮಗಳಾಗಿವೆ. ತ್ರಿಮೂರ್ತಿಗಳಾದ ಶಂಕರ್-ಎಹ್ಸಾನ್-ಲಾಯ್ ಇರುವುದು ನಮಗೆ ಬಹಳ ಸಂತೋಷ. ದಯವಿಟ್ಟು ಒಳ್ಳೆಯ ಸಂಗೀತವನ್ನು ಸೃಷ್ಟಿಸುತ್ತಿರಿ.

ಸಂಪಾದಕರ ಟಿಪ್ಪಣಿ: ನೀವು ಯಾವುದಾದರು ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.

Youth and Truth Banner Image