ಪ್ರಶ್ನೆ: ಸದ್ಗುರು, ಅಸೂಯೆಯನ್ನು ನಿಜವಾಗಿಯೂ ಒಂದು ದೋಷಪೂರಿತ ಭಾವನೆಯೆಂದು ಯಾವಾಗಲೂ ಪರಿಗಣಿಸಲಾಗುತ್ತದೆ. ಆದರೆ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನಗದು ಚೆನ್ನಾಗಿಯೇ ಕೆಲಸ ಮಾಡಿದೆ. ಇದು ನನ್ನನ್ನು ಪ್ರೇರೇಪಿಸುತ್ತದೆ. ಪ್ರತಿ ಬಾರಿ ನನ್ನ ಗೆಳೆತಿಯು ಹೊಸದನ್ನೇನಾದರು ಕಲಿತಾಗ, ನಾನು ಅವಳಿಗಿಂತ ಹೆಚ್ಚಾಗಿ ಕಲಿಯಬೇಕೆನ್ನುವ ಒಳಗಿನ ಪ್ರೇರಣೆಯನ್ನು ಪಡೆಯುತ್ತೇನೆ. ಬಹುಶಃ  ಅದರಿಂದಾಗಿಯೇ ನಾನು ನನ್ನ ಕನಸಿನ ಕಾಲೇಜಿನಲ್ಲಿ ಓದುತ್ತಿದ್ದೇನೆ. ಹಾಗಾಗಿ, ಅಸೂಯೆ ಎನ್ನುವುದು ನಿಜವಾಗಿಯೂ ಒಂದು ನಕಾರಾತ್ಮಕ ಭಾವನೆಯೆಂದು ನಿಮ್ಮ ಅಭಿಪ್ರಾಯವೆ ಅಥವಾ ಅದು ನಮ್ಮನ್ನು ಉತ್ತಮವಾಗಿ ಕೆಲಸ ಮಾಡಲು ಪ್ರೇರೇಪಿಸುತ್ತದೆಯೆ?

ಸದ್ಗುರು: ಅದೃಷ್ಟವಶಾತ್ ಇಂದಿನ ದಿನಗಳಲ್ಲಿ ಇದು ರೂಢಿಯಲ್ಲಿಲ್ಲ, ಆದರೆ ನಾವು ಚಿಕ್ಕವರಿದ್ದಾಗ, ಸಣ್ಣ ಊರುಗಳಲ್ಲಿ ಜನಗಳು ತಮಾಷೆಗಾಗಿ ಮಾಡುತ್ತಿದ್ದ ಒಂದು ವಿಷಯವೆಂದರೆ, ಕತ್ತೆಯ ಬಾಲಕ್ಕೆ ಪಟಾಕಿಗಳಿರುವ ಡಬ್ಬವನ್ನು ಕಟ್ಟುವುದು. ವಿಶೇಷವಾಗಿ ದೀಪಾವಳಿಯ ಸಮಯದಲ್ಲಿ ಇದು ತುಂಬ ಜನಪ್ರಿಯವಾಗುತ್ತಿತ್ತು. ಪಟಾಕಿಗಳು ಹೊತ್ತಿಕೊಂಡು ಡಮ್ ಡಮ್ ಎಂದಾಗ, ಆ ಪಾಪದ ಕತ್ತೆ, ಕುದುರೆಗಿಂತ ವೇಗವಾಗಿ ಊರ ತುಂಬೆಲ್ಲಾ ಓಡುತ್ತಿತ್ತು. ಈ ರೀತಿಯಾಗಿ ನೀವು ಜೀವನದಲ್ಲಿ ಸ್ಫೂರ್ತಿಯನ್ನು ಪಡೆಯಬೇಕೇ? ಕೆಲಸಗಳನ್ನು ಮಾಡಲು ಇದಕ್ಕಿಂತ ಉತ್ತಮ ಹಾಗೂ ಹೆಚ್ಚಿನ ಜಾಣತನದ ದಾರಿಗಳಿವೆ. 

How to stay motivated towards your goal? Chetan Bhagat Asks Sadhguru

 

ನಿಮ್ಮ ಬಾಲ ಸುಡುತ್ತಿದೆ ಎಂದೆನಿಸಿದಾಗ, ನೀವು ಓಡಬಹುದು. ಒಂದು ನಾಯಿಯು ನಿಮ್ಮನ್ನು ಅಟ್ಟಿಸಿಕೊಂಡು ಬರುತ್ತಿದ್ದರೆ, ನೀವು ಬಹಳ ವೇಗವಾಗಿ ಓಡುತ್ತೀರಿ ಎಂದು ಜನ ಹೇಳುತ್ತಾರೆ. ಆದರೆ ಉಸೇನ್ ಬೋಲ್ಟ್-ರವರು ಅವರ ಬಾಲ ಸುಡುತ್ತಿದೆ ಎಂಬ ಕಾರಣಕ್ಕಾಗಿ ಓಡಲಿಲ್ಲ. ಅವರು ಅವರ ಕಾಲುಗಳು ಮತ್ತು ಶ್ವಾಸಕೋಶಗಳನ್ನು ಹೇಗೆ ಸಿದ್ಧಪಡಿಸಿಕೊಂಡಿದ್ದಾರೆಂದರೆ, ಅವರು ಹೇಗೆ ಓಡಿದರೂ ಸಹ, ಅವರು ಎಲ್ಲರಿಗಿಂತ ವೇಗವಾಗಿ ಓಡುತ್ತಾರೆ. ಓಡಬೇಕಾದ ರೀತಿ ಹಾಗೇ ಅಲ್ಲವೇ? ಈಗ, ನಾಯಿಯು ನಿಮ್ಮನ್ನು ಅಟ್ಟಿಸಿಕೊಂಡು ಬರುತ್ತಿದೆ ಅಥವಾ ನಿಮ್ಮ ಬಾಲಕ್ಕೆ ಬೆಂಕಿ ಹತ್ತಿದೆ ಎನ್ನುವ ಕಾರಣಕ್ಕೆ ನೀವು ಓಡಿದರೆ, ಓಡಲು ಅದು ಹಿತಕರವಾದ ರೀತಿಯಲ್ಲ. 

ಈಗ, ನಾಯಿಯು ನಿಮ್ಮನ್ನು ಅಟ್ಟಿಸಿಕೊಂಡು ಬರುತ್ತಿದೆ ಅಥವಾ ನಿಮ್ಮ ಬಾಲಕ್ಕೆ ಬೆಂಕಿ ಹತ್ತಿದೆ ಎನ್ನುವ ಕಾರಣಕ್ಕೆ ನೀವು ಓಡಿದರೆ, ಓಡಲು ಅದು ಹಿತಕರವಾದ ರೀತಿಯಲ್ಲ. 

ವೇಗವಾಗಿ ಓಡುವುದು ಒಂದು ಮುಖ್ಯವಾದ ವಿಷಯವೆ ಸರಿ. ಆದರೆ ನಿಮ್ಮ ಓಡುವ ಅನುಭವವು ಅದ್ಭುತವಾಗಿರಬೇಕಾಗಿರುವುದು ಇನ್ನೊಂದು ವಿಷಯ. ಅದೂ ಸಹ ಮುಖ್ಯವಲ್ಲವೇ? ನೀವು ನಿಮ್ಮ ಕನಸಿನ ಕಾಲೇಜನ್ನು ಸೇರಿರಬಹುದು, ಆದರೆ ಅದು ಮುಂದಿನ ಮೂರು ವರ್ಷಗಳು ನಿಮಗೆ ನರಕವಾಗಬಹುದು. ಈ ಮೂರು ವರ್ಷಗಳು ನಿಮಗೊಂದು ಅದ್ಭುತವಾದ ಅನುಭವವಾಗುವುದು ಮುಖ್ಯವಲ್ಲವೇ? ಕೇವಲ ಓಡುವುದು ಮಾತ್ರ ಮುಖ್ಯವಲ್ಲ. ನೀವದನ್ನು ಹೇಗೆ ಅನುಭವಿಸುತ್ತೀರಿ ಮತ್ತು ನಾಳೆ ಅದರಿಂದ ಏನು ಹೊರಬರುತ್ತದೆ ಎನ್ನುವುದೂ ಸಹ ಅಷ್ಟೇ ಮುಖ್ಯ.

ಒಂದು ವೇಳೆ, ನಾವು ನಮ್ಮ ಬಾಲ ಸುಡುತ್ತಿದೆ ಎಂದು ಓಡುತ್ತೇವೆ ಎಂದಿಟ್ಟುಕೊಳ್ಳಿ. ಹಾಗಾದಾಗ, ಜನರನ್ನು ಓಡುವಂತೆ ಮಾಡಲು, ಅವರ ಬಾಲಕ್ಕೆ ಬೆಂಕಿ ಹಚ್ಚುವುದೊಂದೇ ಮಾರ್ಗವೆಂದು ನಾವು ತಿಳಿದುಬಿಡುತ್ತೇವೆ. ಇದರಿಂದಾಗಿ ಎಲ್ಲರಿಗೂ ನಾವೆಷ್ಟು ಹಾನಿಯನ್ನುಂಟು ಮಾಡುತ್ತೇವೆ ಎನ್ನುವುದನ್ನು ನೋಡಿ! 

ಭಯದಿಂದಾಗಿ ಆ ಕತ್ತೆಗಳು ರೇಸಿನ ಕುದುರೆಗಳಿಗಿಂತ ವೇಗವಾಗಿ ಓಡುವುದನ್ನು ನಾನು ನೋಡಿದ್ದೇನೆ. ಓಡುವ ರೀತಿ ಅದಲ್ಲ. ದಯವಿಟ್ಟು ನಿಮಗೆ ನೀವೇ ಹಾಗೆ ಮಾಡಿಕೊಳ್ಳಬೇಡಿ. 

ಭಯದಿಂದಾಗಿ ಆ ಕತ್ತೆಗಳು ರೇಸಿನ ಕುದುರೆಗಳಿಗಿಂತ ವೇಗವಾಗಿ ಓಡುವುದನ್ನು ನಾನು ನೋಡಿದ್ದೇನೆ. ಓಡುವ ರೀತಿ ಅದಲ್ಲ. ದಯವಿಟ್ಟು ನಿಮಗೆ ನೀವೇ ಹಾಗೆ ಮಾಡಿಕೊಳ್ಳಬೇಡಿ. 

Jealousy Motivates Me. Is That Wrong? #UnplugWithSadhguru

ಸಂಪಾದಕರ ಟಿಪ್ಪಣಿ: Read this Sadhguru's article, ನಿಮ್ಮ ಅಸೂಯೆಯನ್ನು ನಿಮ್ಮ ಪೋಷಣೆಗಾಗಿ ಹೇಗೆ ಬಳಸಬಹುದು ಮತ್ತು ಪರಿಮಳ ತುಂಬಿದ ಹೂಗಳನ್ನು ಸೃಷ್ಟಿಸಲು ಬೇಕಾದ ಗೊಬ್ಬರವನ್ನು ಅದು ಹೇಗೆ ನೀಡಬಲ್ಲದು ಎನ್ನುವುದನ್ನು ಸದ್ಗುರುಗಳು ಈ ಲೇಖನದಲ್ಲಿ ವಿವರಿಸುತ್ತಾರೆ