
ಈಶ ಯೋಗ ಕೇಂದ್ರದಲ್ಲಿ ನಡೆಯುವ ಮಹಾಶಿವರಾತ್ರಿ ಮತ್ತು ಮಹಾ ಅನ್ನದಾನಕ್ಕೆ ಕೊಡುಗೆ ನೀಡಿ.

ಈಶ ಯೋಗ ಕೇಂದ್ರದಲ್ಲಿ ನಡೆಯುವ ಮಹಾಶಿವರಾತ್ರಿ ಮತ್ತು ಮಹಾ ಅನ್ನದಾನಕ್ಕೆ ಕೊಡುಗೆ ನೀಡಿ.
ಈಶ ಯೋಗ ಕೇಂದ್ರದಲ್ಲಿ, ರಾತ್ರಿಯುದ್ದಕ್ಕೂ ನಡೆಯುವ ಮಹಾಶಿವರಾತ್ರಿಯ ಆಚರಣೆಯಲ್ಲಿ ನೆರೆಯುವ ಸಾವಿರಾರು ಭಕ್ತರಿಗೆ ಆಹಾರದ ಪವಿತ್ರ ಅರ್ಪಣೆಯಾದ ಮಹಾ ಅನ್ನದಾನವನ್ನು ನೀಡಲಾಗುತ್ತದೆ. ಇದು ಕೇವಲ ದೈಹಿಕ ಪೋಷಣೆಯ ಅರ್ಪಣೆ ಮಾತ್ರವಲ್ಲ; ಇದು ಸ್ವಯಂಸೇವಕರ ಉದಾರ ಹಸ್ತಗಳಿಂದ ನಡೆಯುವ ಪ್ರಸಾದ ವಿತರಣೆಯಾಗಿದೆ. 8-ದಿನಗಳ ಹಬ್ಬದ ಅವಧಿಯಲ್ಲಿ ಪ್ರತಿದಿನವೂ ಅನ್ನದಾನವನ್ನು ನೀಡಲಾಗುವುದು.
ಪ್ರತಿ ವರ್ಷ ಸಾವಿರಾರು ಜನರು ಈಶ ಯೋಗ ಕೇಂದ್ರದಲ್ಲಿ ನಡೆಯುವ ಮಹಾಶಿವರಾತ್ರಿಯ ಉತ್ಸವದಲ್ಲಿ ಭಾಗವಹಿಸುತ್ತಾರೆ. ಕಾರ್ಯಕ್ರಮಕ್ಕೂ ಮೊದಲು, ಈ ರಾತ್ರಿಯನ್ನು ಅನುಭವಿಸಲು ಮುದ್ರಣ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ತಲುಪಿ ಅವರನ್ನು ಆಹ್ವಾನಿಸಲು ಅಪಾರ ಪ್ರಯತ್ನವನ್ನು ಮಾಡಲಾಗುತ್ತದೆ. ಈಶ ಯೋಗ ಕೇಂದ್ರದಲ್ಲಿ ಮಹಾಶಿವರಾತ್ರಿಯ ನೇರ ಪ್ರಸಾರವನ್ನು ಅನೇಕ ಜನಪ್ರಿಯ ಟೆಲಿವಿಷನ್ ವಾಹಿನಿಗಳಲ್ಲಿ ಮತ್ತು ಅಂತರ್ಜಾಲದಲ್ಲಿ ವೀಕ್ಷಿಸಬಹುದು. ಭಕ್ತರು ಈ ಅಪಾರ ಸಾಧ್ಯತೆಗಳ ರಾತ್ರಿಯ ಅನುಭವವನ್ನು ಪಡೆಯಲು ಹಲವು ಸೌಲಭ್ಯಗಳು ಹಾಗೂ ಸೌಕರ್ಯಗಳನ್ನು ಒದಗಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.
ತೆಂಕೈಲಯ ಭಕ್ತಿ ಪೆರವೈ ಒಂದು ಧಾರ್ಮಿಕ ಟ್ರಸ್ಟ್ ಆಗಿದ್ದು, ಇದು ಆಧ್ಯಾತ್ಮಿಕ ಅನ್ವೇಷಕರಿಗೆ ಭವ್ಯವಾದ ವೆಳ್ಳಿಯಂಗಿರಿ ಪರ್ವತಗಳ ಅನುಭವವನ್ನು ಲಭ್ಯವಾಗಿಸುವ ಉದ್ದೇಶವನ್ನು ಹೊಂದಿದೆ. ಇದು ಸದ್ಗುರುಗಳ ಸಾನಿಧ್ಯದಲ್ಲಿ ಈ ರಾತ್ರಿಯನ್ನು ಆಚರಿಸಲು ಈಶ ಯೋಗ ಕೇಂದ್ರಕ್ಕೆ ಬರುವ ಸಾವಿರಾರು ಆಧ್ಯಾತ್ಮಿಕ ಅನ್ವೇಷಕರಿಗೆ ತನ್ನ ಸೇವೆಗಳನ್ನು ಒದಗಿಸುತ್ತದೆ.