ಪ್ರಶ್ನೆ: ಸದ್ಗರು, ನೀವೆಲ್ಲಿ ಹೋದರೂ, ನೀವೇಕೆ ಒಂದು ನಿರ್ದಿಷ್ಟವಾದ ಭಂಗಿಯಲ್ಲಿ ಕುಳಿತುಕೊಳ್ಳುವಿರಿ? ನಿಮ್ಮ ಎಡಗಾಲಿನ ಚಪ್ಪಲಿಯನ್ನು ಬಿಚ್ಚಿ, ಎಡಗಾಲನ್ನು ಮೇಲಿಟ್ಟು, ಬಲಗಾಲನ್ನು ನೆಲದ ಮೇಲೂರುವಿರಿ. ಇದು ನಿಮ್ಮ ಕುಳಿತುಕೊಳ್ಳುವ ಶೈಲಿಯೋ ಅಥವಾ ಎಲ್ಲರೂ ಹೀಗೆ ಕುಳಿತುಕೊಳ್ಳಬೇಕೆ?

ಸದ್ಗುರು: ನೀವಿನ್ನೂ ಇಂಡಿಯನ್ ಟಾಯ್ಲೆಟ್ ಬಳಸುತ್ತೀರ?

ಪ್ರಶ್ನೆಯನ್ನು ಕೇಳಿದವರು: ಹೌದು.

ಸದ್ಗುರು: ಅದರ ಮೇಲೆ ಒಂದು ನಿರ್ದಿಷ್ಟವಾದ ರೀತಿಯಲ್ಲಿ ಕುಳಿತುಕೊಳ್ಳುತ್ತೀರಲ್ಲವೆ? ಯಾಕೆ? ಯಾಕೆಂದರೆ, ನಮ್ಮ ಶರೀರವು ಆ ರೀತಿಯಲ್ಲಿ ರಚಿಸಲ್ಪಟ್ಟಿದೆ. ವಿದೇಶದ ವಿಶ್ವವಿದ್ಯಾಲಯವೊಂದು ಅಧ್ಯಯನವನ್ನು ಮಾಡಿ, “ಮಲವಿಸರ್ಜನೆಗೆ ಇದು ಅತ್ಯುತ್ತಮ ಭಂಗಿ” ಎ೦ದು ಹೇಳಿದೆ. ಹೀಗೆ ಕೂರುವುದರಿಂದ, ನಿಮ್ಮ ತೊಡೆಗಳು ನಿಮ್ಮ ಕಿಬ್ಬೊಟ್ಟೆಗೆ ತಾಗಿ ಒತ್ತಡವನ್ನು ತರುತ್ತವೆ ಮತ್ತು ಒಳಗಿನಿಂದ ಏನೇನು ಹೊರಬರಬೇಕೋ, ಅದೆಲ್ಲವೂ ಸಲೀಸಾಗಿ ಹೊರಬರುತ್ತದೆ, ಇಲ್ಲದಿದ್ದರೆ, ಅದು ನಿಧಾನವಾಗಿ ನಿಮ್ಮ ತಲೆಗೇರುತ್ತದೆ.

ಹೊಂದಾಣಿಕೆಯನ್ನು ತರೋಣ

ಯೋಗವಿಜ್ಞಾನದಲ್ಲಿ, ಕೆಲವೊಂದು ದೇಹಭಂಗಿಗಳು, ಕೆಲ ನಿರ್ದಿಷ್ಟವಾದ ಚಟುವಟಿಕೆಗಳನ್ನು ಉತ್ತಮವಾಗಿ ಬೆಂಬಲಿಸುತ್ತವೆಯೆಂದು ನಾವು ಗಮನಿಸಿದ್ದೇವೆ. ನಾವು ಹಠಯೋಗವೆಂದು ಕರೆಯಲ್ಪಡುವ ವಿಜ್ಞಾನದ ಪ್ರಕಾರ, ದೈಹಿಕ ಭಂಗಿಗಳು, ಒ೦ದು ರೀತಿಯ ಜ್ಯಾಮಿತಿಯ ಪರಿಪೂರ್ಣತೆಗೆ ದೇಹವನ್ನು ಕೊ೦ಡ್ಡೊಯ್ಯಲು ಅದನ್ನು ಸ್ವಾಧೀನಕ್ಕೆ ತ೦ದುಕೊಳ್ಳುವ ಬಗ್ಗೆಯಾಗಿದೆ. ಆಗ ನಿಮ್ಮ ಜ್ಯಾಮಿತಿಯು, ಸೃಷ್ಟಿಯ ವಿಶಾಲವಾದ ಜ್ಯಾಮಿತಿಯೊಂದಿಗೆ ಹೊಂದಿಕೊಳ್ಳುತ್ತದೆ ಮತ್ತು ಸದಾ ನೀವು ಸೃಷ್ಟಿಯೊ೦ದಿಗೆ ಮೇಳೈಕೆಯಲ್ಲಿರುತ್ತೀರಿ. ಎಂದೂ ತಪ್ಪುವುದಿಲ್ಲ.

 

ನೀವೆಷ್ಟು ಸಮತೋಲನ ಹೊ೦ದಿದ್ದೀರಿ, ವಿಷಯಗಳನ್ನು ನೀವೆಷ್ಟು ಸ್ಪಷ್ಟತೆಯಿಂದ ನೋಡುತ್ತೀರಿ ಮತ್ತು ನೀವೆಷ್ಟು ಉತ್ತಮವಾಗಿ ಕೆಲಸಕಾರ್ಯಗಳನ್ನು ಮಾಡುತ್ತೀರಿ ಎನ್ನುವುದು ನೀವೆಷ್ಟು ಹೊಂದಾಣಿಕೆಯಿ೦ದಿದ್ದೀರಿ ಎನ್ನುವುದರ ಮೇಲೆ ಅವಲಂಬಿಸಿರುತ್ತದೆ. ಮನುಷ್ಯರು, ಮರ, ಜೀವನ ಅಥವಾ ನಿಮ್ಮ ಸುತ್ತಲಿನ ಪರಿಸರದೊಂದಿಗೆ ನೀವೆಷ್ಟು ಹೊಂದಿಕೊಂಡಿದ್ದೀರಿ ಎನ್ನುವುದು, ಜಗತ್ತಿನಲ್ಲಿ ನಿಮ್ಮ ಕೆಲಸಕಾರ್ಯಗಳು ಎಷ್ಟು ಸೌಮ್ಯವಾಗಿ ಮತ್ತು ಘರ್ಷಣಾರಹಿತವಾಗಿ ಜರುಗುತ್ತವೆ ಎ೦ಬುದನ್ನು ನಿರ್ಧರಿಸುತ್ತದೆ. 

ನಾನು ಎಲ್ಲಾ ಸಮಯದಲ್ಲೂ ಹೀಗೆ ಕೂರುವುದಿಲ್ಲ – ಮಾತನಾಡುವಾಗ ಮಾತ್ರ. ಸಿದ್ಧಾಸನವೆಂಬ ಒಂದು ಆಸನವಿದೆ. ಅದಕ್ಕೆ ಹಲವಾರು ವಿಷಯಾಂಶಗಳಿವೆ – ಅದರಲ್ಲಿನ ಒ೦ದು ಸರಳ ಅಂಶವೆ೦ದರೆ: ಎಡ ಹಿಮ್ಮಡಿಯಲ್ಲಿ ಒಂದು ಬಿಂದುವಿದೆ ಮತ್ತದನ್ನು ಇಂದು ವೈದ್ಯಕೀಯ ವಿಜ್ಞಾನವು ಅಕಿಲ್ಸ್ (Achilles) ಎಂದು ಕರೆಯುತ್ತಿದೆ. ನಿಮಗೆ  ಅಕಿಲ್ಸ್ (Achilles) ಎ೦ಬ ಮನುಷ್ಯನ ಬಗ್ಗೆ ತಿಳಿದಿದೆಯೆ?

ನೀವು ನಿಮ್ಮ ಅಕಿಲ್ಸ್-ಅನ್ನು (ಹಿಮ್ಮಡಿಯನ್ನು) ನಿಮ್ಮ ಮೂಲಾಧಾರಕ್ಕೆ ಮುಟ್ಟಿಸಬೇಕು. ಇವೆರಡು ಒಂದಕ್ಕೊಂದು ಮುಟ್ಟಿದಾಗ, ನಿಮ್ಮಲ್ಲಿ ಅನೇಕ ವಿಷಯಗಳು ಸ್ಪಷ್ಟವಾಗುತ್ತವೆ. ನಿಮ್ಮ ಆಲೋಚನೆಗಳು ಸ್ಪಷ್ಟವಾಗುತ್ತವೆ, ನಿಮ್ಮ ಭಾವನೆಗಳು ಸ್ಪಷ್ಟವಾಗುತ್ತವೆ ಮತ್ತು ನಿಮ್ಮ ಸುತ್ತಲಿನ ಆಗುಹೋಗುಗಳ ಬಗ್ಗೆ ನಿಮಗೊಂದು ಸ್ಪಷ್ಟವಾದ ಗ್ರಹಿಕೆಯಿರುತ್ತದೆ. 

ನಿಮ್ಮ ಅಕಿಲ್ಸ್ ಅಥವಾ ಹಿಮ್ಮಡಿಯ ಬಿ೦ದುವು ಮೂಲಾಧಾರವನ್ನು ಮುಟ್ಟುವ ರೀತಿಯಲ್ಲಿ ಕುಳಿತುಕೊಂಡಾಗ, ನೀವು ಯಾವುದರ ಪರ, ವಿರೋಧವಾಗಿರದೆ, ಸಮತೋಲನವನ್ನು ಹೊ೦ದುವ೦ತೆ ಮಾಡುತ್ತದೆ.

ಅಕಿಲ್ಸ್-ನ ಹಿಮ್ಮಡಿಗೆ ಒಂದು ಬಾಣವನ್ನು ಹೊಡೆದಾಗ ಅವನ ಸಾವಾಯಿತು ಎಂದು ನೀವು ಕೇಳಿದ್ದೀರಿ. ಹಿಮ್ಮಡಿಗೆ ಏಟಾಗಿ ಯಾರಾದರು ಸತ್ತರೆಂದರೆ ನೀವು ನಂಬುತ್ತೀರಾ? ಆದರೆ ಅಕಿಲ್ಸ್ ಸತ್ತಿದ್ದು ಹಾಗೆ. ಭಾರತದಲ್ಲಿಯೂ, ಅದೇ ರೀತಿಯಲ್ಲಿ ಸಾವನ್ನಪ್ಪಿದ ಇನ್ನೋರ್ವನಿದ್ದಾನೆ, ಅಕಿಲ್ಸ್-ಗಿಂತ ಬಹಳ ಹಿಂದೆ – ಕೃಷ್ಣ. ಬರೀ ಕುತ್ತಿಗೆಯನ್ನು ಸೀಳಿ ಅಥವಾ ತಲೆಯೊನ್ನೊಡೆದು ಸಾಯಿಸುವ ಹಾಗಲ್ಲ, ಅವರುಗಳನ್ನು ಒಂದು ಸಮರ್ಥವಾದ ರೀತಿಯಲ್ಲಿ ಕೊಲ್ಲಲಾಯಿತು ಎಂದು ಇದು ಹೇಳುತ್ತದೆ. ಅಕಿಲ್ಸ್-ನ ಬಿಂದುವಿಗೊಂದು ಬಾಣವನ್ನು ಬಿಟ್ಟಾಗ, ಅವರು ಸಾಯಲೇಬೇಕಾಯಿತು. ದೇಹದಲ್ಲಿ ಒಂದು ನಿರ್ದಿಷ್ಟವಾದ ಪ್ರಾಣಶಕ್ತಿಯ ವ್ಯವಸ್ಥೆಯಿದೆ. ನಿಮ್ಮ ಅಕಿಲ್ಸ್ ಅಥವಾ ಹಿಮ್ಮಡಿಯ ಬಿ೦ದುವು ಮೂಲಾಧಾರವನ್ನು ಮುಟ್ಟುವ ರೀತಿಯಲ್ಲಿ ಕುಳಿತುಕೊಂಡಾಗ, ನೀವು ಯಾವುದರ ಪರ, ವಿರೋಧವಾಗಿರದೆ, ಸಮತೋಲನವನ್ನು ಹೊ೦ದುವ೦ತೆ ಮಾಡುತ್ತದೆ.

ಪರ ವಿರೋಧದ ನಿಲುವುಗಳು ಬೇಡ

ನಮಗೆ ನಮ್ಮದೇ ಆದ ಅಭಿಪ್ರಾಯಗಳು, ವಿಚಾರಗಳು ಮತ್ತು ಸಿದ್ಧಾಂತಗಳಿರುತ್ತವೆ. ನಿಮ್ಮದೇ  ಜೀವನಾನುಭೂತಿ ಮತ್ತು ನಿಮ್ಮ ಮನಸ್ಸಿನಲ್ಲಿ ಒತ್ತಿಕೊ೦ಡಿರುವ ಛಾಪುಗಳು, ನೀವು ನೋಡುವುದೆಲ್ಲವನ್ನೂ ಪ್ರಭಾವಿಸುತ್ತವೆ. ನಿಮಗದಿಷ್ಟ, ನಿಮಗದಿಷ್ಟವಿಲ್ಲ, ನಿಮಗೆ ಆ ವ್ಯಕ್ತಿಯನ್ನು ಕಂಡರೆ ಪ್ರೀತಿ, ಈ ವ್ಯಕ್ತಿಯನ್ನು ಕಂಡರೆ ದ್ವೇಷ – ಇದೆಲ್ಲದರ ಕಾರಣವೇನೆಂದರೆ - ನೀವು ಸದಾಕಾಲ ನಿಮ್ಮದೇ ನಿಲುವುಗಳನ್ನು ತೆಗದುಕೊಳ್ಳುತ್ತಿರುವುದು. ಆದರೆ, ನಿಮಗೆ ಜೀವನವನ್ನು ನಿಜವಾಗಿಯೂ ತಿಳಿಯಬೇಕಿದ್ದರೆ, ನೀವು ಯಾವ ನಿಲುವುವನ್ನೂ ತೆಗದುಕೊಳ್ಳದಿರುವುದು ಅತಿ ಮುಖ್ಯವಾದ ವಿಷಯ. ನಿಮ್ಮ ಜೀವನದ ಪ್ರತಿಕ್ಷಣವೂ, ಎಲ್ಲವನ್ನೂ ಸಂಪೂರ್ಣ ಹೊಸದಾಗಿ ನೋಡುವುದಕ್ಕೆ ನೀವು ಸಿದ್ಧರಿರಬೇಕು.

ಮೂವತ್ತು ವರ್ಷಗಳಿಗಿಂತ ಹೆಚ್ಚು ಕಾಲ ನನ್ನೊಂದಿಗಿರುವರು, ಪ್ರತಿದಿನ ನನ್ನ ಜೊತೆ ಕೆಲಸ ಮಾಡುವವರು – ಇವರ ಬಗ್ಗೆ ನನಗೆ ಒಂದೇ ಒಂದು ಅಭಿಪ್ರಾಯವೂ ಸಹ ಇಲ್ಲ.

ಇದನ್ನು ಅರ್ಥಮಾಡಿಕೊಳ್ಳಲು ಜನರಿಗೆ ಬಹಳ ಕಷ್ಟ. ಮೂವತ್ತು ವರ್ಷಗಳಿಗಿಂತ ಹೆಚ್ಚು ಕಾಲ ನನ್ನೊಂದಿಗಿರುವರು, ಪ್ರತಿದಿನ ನನ್ನ ಜೊತೆ ಕೆಲಸ ಮಾಡುವವರು – ಇವರ ಬಗ್ಗೆ ನನಗೆ ಒಂದೇ ಒಂದು ಅಭಿಪ್ರಾಯವೂ ಸಹ ಇಲ್ಲ. ನಾನು ಏನಾದರೂ ಕೆಲಸ ಮಾಡಬೇಕೆ೦ದಾಗ ಮಾತ್ರ, ಅವರ ಸಾಮರ್ಥ್ಯ ಅಥವಾ ಅಂತದ್ದೇನನ್ನಾದರು ನಾನು ನೋಡಬಹುದಷ್ಟೆ. ಆದರೆ, ಅವರ ಬಗ್ಗೆ ನನಗೆ ಒಂದೇ ಒಂದು ಅಭಿಪ್ರಾಯವೂ ಇಲ್ಲ. ಇಷ್ಟು ಹೊತ್ತಿಗಾಗಲೇ ನೀವು ನಿಮ್ಮ ಅಭಿಪ್ರಾಯಗಳನ್ನು ಮಾಡಿಕೊಂಡಾಗಿರಬೇಕು, ಆದರೆ, ನಾನು ಮಾಡುತ್ತಿಲ್ಲ. ಏಕೆ೦ದರೆ ಆಧ್ಯಾತ್ಮಿಕತೆಯ ಸಾರಂಶವೇ ಅದು – ನಾವು ನಿರಂತರವಾಗಿ, ಎಲ್ಲಾ ಜೀವವನ್ನೂ ಒ೦ದು ಸಾಧ್ಯತೆಯಾಗಿ ನೋಡುತ್ತೇವೆ. 

ಸಾಧ್ಯತೆ ಮತ್ತು ನಿಜಸ್ಥಿತಿಯ ನಡುವೆ, ಖಂಡಿತವಾಗಿಯೂ ಒಂದ ಅಂತರವಿದೆ. ಕೆಲವರಿಗೆ ಆ ದೂರವನ್ನು ಕ್ರಮಿಸುವ ಧೈರ್ಯ ಮತ್ತು ಬದ್ಧತೆಯಿರುತ್ತದೆ, ಕೆಲವರಿಗಿರುವುದಿಲ್ಲ. ಆದರೆ, ಪ್ರತಿಯೊಂದು ಜೀವವು ಒಂದು ಸಾಧ್ಯತೆ. ನೀವು ಆ ಸಾಧ್ಯತೆಯನ್ನು ತೆರದಿಟ್ಟುಕೊಂಡಿರಬೇಕೆಂದರೆ, ನೀವು ಎ೦ದೂ ಯಾರ ಬಗ್ಗೆಯೂ ಯಾವುದೇ ರೀತಿಯಾದ ನಿಲುವನ್ನು ತೆಗದುಕೊಳ್ಳಬಾರದು. 

 

ಒಳ್ಳೆಯದು, ಕೆಟ್ಟದ್ದು, ಅಸಹ್ಯ – ನೀವಿಂತಹ ಅಭಿಪ್ರಾಯಗಳನ್ನು ಮಾಡಿಕೊಳ್ಳಬಾರದು: ನೀವು ಸುಮ್ಮನೆ ಅವರನ್ನು ನೋಡಿ. ಈ ಕ್ಷಣದಲ್ಲಿ ಅವರು ಹೇಗಿರುವರೋ ಅದೇ ನನಗೆ ಪ್ರಸ್ತುತವಾಗಿರುವುದು. ನಿನ್ನೆ ನೀವು ಹೇಗಿದ್ದಿರಿ ಎಂಬುದು ನನ್ನ ವ್ಯವಹಾರವಲ್ಲ. ನೀವು ನಾಳೆ ಹೇಗಿರಬಹುದು, ಅದನ್ನು ನೋಡೋಣ. ನಾಳೆಯನ್ನು ಹೊಸದಾಗಿ ಸೃಷ್ಟಿಸಬೇಕು, ಈಗಲೇ ಅದನ್ನು ನಿಶ್ಚಯಿಸುವುದಲ್ಲ.

ಸರಿಯಾದ ಜ್ಯಾಮಿತಿಯನ್ನು ತ೦ದುಕೊಳ್ಳಿ

ನಮ್ಮ ದೇಹಕ್ಕೆ ನಿರ್ದಿಷ್ಟವಾದ ಜ್ಯಾಮಿತಿಯದೆ. ಆದರೆ, ಇಂದಿನ ದಿನಗಳಲ್ಲಿ, ಪಾಶ್ಚಾತ್ಯ ಸಂಸ್ಕೃತಿಗಳು ಪ್ರಚಾರ ಮಾಡುತ್ತಿರುವುದೇನೆ೦ದರೆ – “ಯೋಗವು ಮೈಹಿಗ್ಗಿಸುವ ಒ೦ದು ವ್ಯಾಯಾಮ. ಅದರ ಬದಲಾಗಿ, ನೀವು ಪಿಲಾಟೀಸ್, ಬಾಕ್ಸಿಂಗ್, ಟೆನ್ನಿಸ್-ನಂತಹ ಅಭ್ಯಾಸಗಳನ್ನು ಮಾಡಬಹುದು...” ನಿಮಗೆ ಕೇವಲ ಗಟ್ಟಿಮುಟ್ಟಾಗಿರಬೇಕೆ೦ದಾದರೆ, ಓಡಿ, ಬೆಟ್ಟವನ್ನು ಹತ್ತಿ, ಟೆನ್ನಿಸ್ ಆಟವಾಡಿ ಅಥವಾ ಇನ್ನೇನನ್ನಾದರು ಮಾಡಿ. ಆದರೆ, ಯೋಗವು ಫಿಟ್ನೆಸ್-ನ ಬಗ್ಗೆಯಲ್ಲ. ಫಿಟ್ನೆಸ್ ಒಂದು ಪರಿಣಾಮವಷ್ಟೆ. ಜೀವನದ ಸರಿಯಾದ ಜ್ಯಾಮಿತಿಯನ್ನು ಪಡೆಯುವುದು ಮುಖ್ಯವಾದ ಸಂಗತಿ, ಏಕೆಂದರೆ, ಭೌತಿಕ ಜಗತ್ತಿರುವುದೇ ಜ್ಯಾಮಿತಿಯಲ್ಲಿ. 

 

ಒಂದು ಕಟ್ಟಡವು ಇಂದು ನಮ್ಮ ತಲೆ ಮೇಲೆ ಬೀಳುತ್ತದೆಯೋ ಅಥವಾ ಧೀರ್ಘಕಾಲ ನಿಂತಿರುತ್ತದೆಯೋ ಎಂಬುವುದು ಮೂಲಭೂತವಾಗಿ ಅದರ ಜ್ಯಾಮಿತಿಯು ಎಷ್ಟು ಉತ್ತಮವಾಗಿದೆ ಎನ್ನುವುದರ ಮೇಲೆ ಅವಲಂಬಿಸಿರುತ್ತದೆ. ಇದು, ದೇಹ, ಸೌರಮಂಡಲ, ವಿಶ್ವ ಮತ್ತು ಎಲ್ಲದಕ್ಕೂ ಅನ್ವಯಿಸುತ್ತದೆ.

ಭೂಮಿಯು ಸೂರ್ಯನ ಸುತ್ತು ತಿರುಗುತ್ತಿರುವುದು ಜ್ಯಾಮಿತಿಯು ನಿಖರತೆಯಿಂದಾಗಿಯೇ ಹೊರತು ಅದನ್ನು  ಸೂರ್ಯನೊಂದಿಗೆ ಉಕ್ಕಿನ ತಂತಿಯಿಂದ ಜೋಡಿಸಲಾಗಿದೆಯಂಬ ಕಾರಣಕ್ಕಲ್ಲ. ಜ್ಯಾಮಿತಿಯಲ್ಲಿ ಒಂದು ಚಿಕ್ಕ ಕುಂದಾದರೂ, ಅದು ಶಾಶ್ವತವಾಗಿ ನಾಶವಾಗುತ್ತದೆ – ನಿಮ್ಮ ಬಗ್ಗೆಯೂ ಅದು ಸತ್ಯ. ನಿಮ್ಮ ಮೂಲಭೂತವಾದ ಜ್ಯಾಮಿತಿಯಿಂದ ನೀವು ಆಚೆಈಚೆ ಸರಿದಿರೆಂದರೆ, ನಿಮ್ಮ ಕಥೆಯು ಮುಗಿದಂತೆ.
 

ನಿಮಗೆ ಕೇವಲ ಗಟ್ಟಿಮುಟ್ಟಾಗಿರಬೇಕೆ೦ದಾದರೆ, ಓಡಿ, ಬೆಟ್ಟವನ್ನು ಹತ್ತಿ, ಟೆನ್ನಿಸ್ ಆಟವಾಡಿ ಅಥವಾ ಇನ್ನೇನನ್ನಾದರು ಮಾಡಿ. ಆದರೆ, ಯೋಗವು ಫಿಟ್ನೆಸ್-ನ ಬಗ್ಗೆಯಲ್ಲ. ಫಿಟ್ನೆಸ್ ಒಂದು ಪರಿಣಾಮವಷ್ಟೆ. ಜೀವನದ ಸರಿಯಾದ ಜ್ಯಾಮಿತಿಯನ್ನು ಪಡೆಯುವುದು ಮುಖ್ಯವಾದ ಸಂಗತಿ, ಏಕೆಂದರೆ, ಭೌತಿಕ ಜಗತ್ತಿರುವುದೇ ಜ್ಯಾಮಿತಿಯಲ್ಲಿ.

ಚಿಕ್ಕ ವಯಸ್ಸಿನಿ೦ದಲೇ, ಸರಿಯಾದ ಜ್ಯಾಮಿತಿಯ ಪ್ರಜ್ಞೆಯನ್ನು ತರಲು ನೀವು ಸರಿಯಾದ ಅಭ್ಯಾಸಗಳನ್ನು ಮಾಡುವುದು ಬಹಳ ಮುಖ್ಯ. ಹಾಗೆ ಮಾಡಿದಾಗ, ಜೀವನವನ್ನು ಎದುರಿಸಲು ನೀವು ಸಮರ್ಥರಾಗುವಿರಿ. ಜೀವನದಲ್ಲಿ ಕೇವಲ ಒಳ್ಳೆಯ ವಿಷಯಗಳು ನಡೆಯಬೇಕೆ೦ದು ಬಯಸುವವರು ನಿಸ್ಸಂಶಯವಾಗಿ ಜೀವನವನ್ನು ಎದುರಿಸಲು ಅಸಮರ್ಥರು – ಏಕೆಂದರೆ, ಜೀವನದ ಕಠಿಣ ಪರಿಸ್ಥಿತಿಗಳಲ್ಲಿ ನಿಮಗೆ ಸಂತೋಷದಿಂದ ಮುನ್ನಡೆಯಲು ಗೊತ್ತಿಲ್ಲವಾದರೆ, ನೀವು ಎಲ್ಲಾ ಸಾಧ್ಯತೆಗಳನ್ನು ದೂರತಳ್ಳುವಿರಿ. ಸ್ವಲ್ಪ ತೊ೦ದರೆಯನ್ನು ತಪ್ಪಿಸಬೇಕೆನ್ನುವ ಸಲುವಾಗಿ, ನೀವು ಜೀವನದಲ್ಲಿ ಬಹು ದೊಡ್ಡ ಸಾಧ್ಯತೆಗಳಿ೦ದ ತಪ್ಪಿಸಿಕೊಳ್ಳುವಿರಿ. ನಿಮ್ಮ  ಜ್ಯಾಮಿತಿಯನ್ನು ಒ೦ದು ರೀತಿಯ ಸಮನ್ವಯ ಸ್ಥಿತಿಯಲ್ಲಿರಿಸಿಕೊ೦ಡಾಗ ಮಾತ್ರ, ನೀವು ಜೀವನದ ಕಠಿಣ ಪರಿಸ್ಥಿತಿಗಳಲ್ಲಿಯೂ ಮು೦ದೆ ಸಾಗಲು ಸಿದ್ಧವಿರುತ್ತೀರಿ, ಅದು ಎ೦ತಹುದ್ದೇ ಪರಿಸ್ಥಿತಿಯಾಗಿರಲಿ!

ಸಂಪಾದಕರ ಟಿಪ್ಪಣಿ: ನೀವು ಯಾವುದಾದರೂ ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವಾ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.

Youth and Truth Banner Image