ಸದ್ಗುರು: ಶಂಕರನ್ ಪಿಳ್ಳೈ ಒಂದು ಸ್ಥಳೀಯ ಬಸ್ಸನ್ನು ಹತ್ತಿದ. ತಕ್ಷಣ, ಅವನು ಒಂದು ಶಾಲ್-ನಿಂದ ಅವನ ಮುಖವನ್ನು ಮುಚ್ಚಿಕೊಂಡು ಮುದುರಿ ಕುಳಿತ. ಗೊಂದಲಗೊಂಡ ಸಹ ಪ್ರಯಾಣಿಕನು, “ಸರ್, ನೀವು ಹುಷಾರಾಗಿದ್ದೀರ?” ಎಂದು ಅವನನ್ನು ಕೇಳಿದ. ಶಂಕರನ್ ಪಿಳ್ಳೈ ತಾನು ಸರಿಯಾಗಿರುವುದಾಗಿ ಅವನಿಗೆ ಭರವಸೆ ನೀಡಿ, “ಏನೆಂದರೆ, ನಾನು ಅಲ್ಲಿರುವ ಆ ಮುದುಕಿಯನ್ನು ನೋಡಿದರೆ, ನಾನವಳಿಗೆ ನನ್ನ ಸೀಟನ್ನು ಬಿಟ್ಟು ಕೊಡಬೇಕಾಗುತ್ತದೆ. ಅವಳನ್ನು ನೋಡುವುದನ್ನು ತಪ್ಪಿಸಲು ನಾನು ಹೀಗೆ ಮುದುಡಿಕೊಳ್ಳುತ್ತಿದ್ದೇನೆ.” ಎಂದು ಹೇಳಿದ.

ಶಂಕರನ್ ಪಿಳ್ಳೈಗಿದ್ದ ಆಯ್ಕೆಗಳೆಂದರೆ ತಾನು ನಿಂತುಕೊಂಡು ತನ್ನ ಸೀಟನ್ನು ಬಿಟ್ಟುಕೊಡುವುದು ಅಥವಾ ಕುಳಿತುಕೊಂಡೇ ಇರುವುದು. ಆದರೆ ಬಹಳಷ್ಟು ಜನರು ವಿವಿಧ ರೀತಿಗಳ ಒಳಗೊಳ್ಳುವಿಕೆಯನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಏಕೆಂದರೆ ತಪ್ಪಿಸಿಕೊಳ್ಳುವುದು ಒಂದು ದೊಡ್ಡ ಕರ್ಮವೆಂದು ಅವರೆಂದಿಗೂ ಅರ್ಥಮಾಡಿಕೊಳ್ಳುವುದಿಲ್ಲ. ನೀವು ಒಳಗೊಳ್ಳುವಿಕೆಯನ್ನು ದೂರವಿರಿಸಲು ಯತ್ನಿಸಿದಾಕ್ಷಣ, ಕರ್ಮವು ಹೆಚ್ಚಾಗುತ್ತದೆ. ಮತ್ತು “ನಾನು ಸೀಟನ್ನು ಬಿಟ್ಟುಕೊಡಬೇಕೇ ಅಥವಾ ಬೇಡವೇ” ಎಂಬ ಲೆಕ್ಕಾಚಾರವು ಮತ್ತಷ್ಟು ದೊಡ್ಡದಾದ ಕರ್ಮ.

 

ಈ ಸಿಕ್ಕಿಕೊಳ್ಳುವ-ತಪ್ಪಿಸಿಕೊಳ್ಳುವ ಬಲೆಯಿಂದ ಒಬ್ಬರು ಪಾರಾಗುವುದಾದರು ಹೇಗೆ? ಈ ಪ್ರಶ್ನೆಯು ಬಹಳಷ್ಟು ಜನರನ್ನು ಗೊಂದಲಕ್ಕೀಡುಮಾಡುತ್ತದೆ. ಗೊಂದಲದ ಸ್ಥಿತಿಯಲ್ಲಿ, ನಿಮ್ಮ ಸುತ್ತಲಿನ ಎಲ್ಲವೂ ಸಹ ನಿಮಗೆ ಅಂಟಿಕೊಳ್ಳುತ್ತದೆ! ಅದು ಹೇಗೆಂದರೆ, ನೀವೊಂದು ಒಳ್ಳೇ ಅಂಟಿನ ಲೇಪನವನ್ನು ಹೊಂದಿದ್ದೀರ ಮತ್ತು ಪ್ರತಿ ಧೂಳಿನ ಕಣವೂ ನಿಮಗೆ ಅಂಟಿಕೊಳ್ಳುತ್ತದೆ. ಕರ್ಮವನ್ನು ಗಳಿಸುವುದಕ್ಕೂ ಮತ್ತು ಒಳ್ಳೆಯ ಅಥವಾ ಕೆಟ್ಟ ಕೆಲಸಗಳನ್ನು ಮಾಡುವುದಕ್ಕೂ ಯಾವ ಸಂಬಂಧವಿಲ್ಲ. ಗೊಂದಲಮಯ ಉದ್ದೇಶಗಳು ಮತ್ತು ಸೀಮಿತವಾದ ಆಸೆಗಳಿಂದ ಸಲೀಸಾಗಿ ನೀವು ನಿಮ್ಮೊಳಗೆ ಕರ್ಮವನ್ನು ಕಟ್ಟಿಕೊಳ್ಳುತ್ತೀರ. ಸ್ವಲ್ಪ ಸಮಯದ ನಂತರ, ನಿಮ್ಮ ಸುತ್ತ ಎಷ್ಟು ದೊಡ್ಡ ಕರ್ಮದ ಗುಡ್ಡೆಯಿರುತ್ತದೆಂದರೆ ನಿಮಗೆ ಉಸಿರಾಡಲೂ ಸಹ ಕಷ್ಟವಾಗುತ್ತದೆ.

ಮನುಷ್ಯನ ಬಯಕೆಗಳು ಸೀಮಿತವಾಗಿರಬಹುದು ಅಥವಾ ಅಪರಿಮಿತವಾಗಿರಬಹುದು. ನೀವು ಅಪರಿಮಿತವಾದ ಬಯಕೆಯನ್ನು ಆರಿಸಿಕೊಂಡರೆ, ಅದೇ ನಿಮ್ಮ ಕರ್ಮದ ಕೊನೆ.

ಒಬ್ಬರು ಇಷ್ಟು ದೊಡ್ಡದಾದ ಕರ್ಮದ ಗುಡ್ಡೆಯನ್ನು ಹೇಗೆ ಕೆಡವಿಹಾಕಬಹುದು? ಉತ್ತರವು ಸರಳ: ನೀವದನ್ನು ಕೆಡವಲು ಪ್ರಯತ್ನಿಸಬೇಡಿ. ನೀವು ಕೇವಲ ನಿಮ್ಮ ಅಂಟನ್ನು ತೊಳೆದುಹಾಕಿ. ಒಂದೇ ಕ್ಷಣದಲ್ಲಿ ಇಡೀ ಬೆಟ್ಟವು ಕಳಚಿ ಬೀಳುತ್ತದೆ. ಈ ಅಂಟನ್ನು ಹೇಗೆ ತೆಗೆಯುವುದು? ತಪ್ಪಿಸಿಕೊಳ್ಳುವುದರಿಂದಲ್ಲ, ಆದರೆ ಪ್ರಜ್ಞಾಪೂರ್ವಕವಾದ ಒಳಗೊಳ್ಳುವಿಕೆಯಿಂದ. ಜಾಗೃತವಾದ ಒಳಗೊಳ್ಳುವಿಕೆಯಿಂದ, ಮತ್ತೆಂದೂ ಅದು ನಿಮಗೆ ಅಂಟಿಕೊಳ್ಳಬಹುದಾದ ಸಾಧ್ಯತೆ ಇರುವುದಿಲ್ಲ.

ಮನುಷ್ಯನ ಬಯಕೆಗಳು ಸೀಮಿತವಾಗಿರಬಹುದು ಅಥವಾ ಅಪರಿಮಿತವಾಗಿರಬಹುದು. ನೀವು ಅಪರಿಮಿತವಾದ ಬಯಕೆಯನ್ನು ಆರಿಸಿಕೊಂಡರೆ, ಅದೇ ನಿಮ್ಮ ಕರ್ಮದ ಕೊನೆ. ಪರ್ಯಾಯವಾಗಿ, ನೀವು ನಿಮ್ಮ ಇಷ್ಟ ಮತ್ತು ಅನಿಷ್ಟಗಳು, “ನನ್ನದು” ಮತ್ತು “ನನ್ನದಲ್ಲ” ಎಂಬ ಸಣ್ಣ ಯೋಚನೆಗಳಿಂದಾಚೆಗೆ ಬೆಳೆದರೆ, ಅದೂ ಸಹ ನಿಮ್ಮ ಕರ್ಮದ ಕೊನೆಯಾಗುತ್ತದೆ. ನಿಮ್ಮ ಬಯಕೆಗಳು ಒಳಗೂಡಿಸಿಕೊಳ್ಳುವಂತವುಗಳಾಗಲಿ, ಎಲ್ಲವನ್ನೂ ನಿಮ್ಮದಾಗಿಸಿಕೊಳ್ಳಿ, ಜಗತ್ತಿಗೇ ಒಬ್ಬ ತಾಯಿಯಾಗಿ, ಮತ್ತು ಸಿಕ್ಕಿಹಾಕಿಕೊಳ್ಳಬಹುದಾದ ಸಾಧ್ಯತೆಯು ಶಾಶ್ವತವಾಗಿ ಕಣ್ಮರೆಯಾಗುತ್ತದೆ.

ಯೋಗದ ಇಡೀ ವ್ಯವಸ್ಥೆಯು ಯಾವುದೇ ನಿರ್ದಿಷ್ಟವಾದ ಉದ್ದೇಶ ಅಥವಾ ಪ್ರೇರಣೆ ಇಲ್ಲದೆಯೇ ಒಂದು ಗಾಢವಾದ ಒಳಗೊಳ್ಳುವಿಕೆಯ ಭಾವವನ್ನು ಪೋಷಿಸುವುದಾಗಿದೆ.

ಆಧ್ಯಾತ್ಮಿಕ ಜೀವನದ ಪರಮ ಗುರಿಯೆಂದರೆ ನಿಷ್ಪಕ್ಷಪಾತವಾದ ಒಳಗೊಳ್ಳುವಿಕೆ ಮತ್ತು ನಿಶ್ಚಲವಾದ ಗಮನ. ನೀವು ಯಾವುದರೊಂದಿಗೆ ತೊಡಗಿಸಿಕೊಳ್ಳುತ್ತೀರ ಅಥವಾ ಗಮನವನ್ನು ಹರಿಸುತ್ತೀರ ಎನ್ನುವುದು ಮುಖ್ಯವಲ್ಲ. ಅದು ದೇವರಾಗಿರಬಹುದು, ಒಂದು ಕಲ್ಲುಬಂಡೆ, ಒಬ್ಬ ಪುರುಷ ಅಥವಾ ಒಬ್ಬ ಸ್ತ್ರೀ ಆಗಿರಲೂಬಹುದು. ಗಮನಿಸುವ ವಸ್ತುವು ಮುಖ್ಯವಲ್ಲ. ಯೋಗ ಪದ್ಧತಿಯಲ್ಲಿನ ಆಕಾಶಿ ಮುದ್ರೆ ಅಭ್ಯಾಸವು ಶೂನ್ಯದತ್ತ ಗಮನಹರಿಸುವುದನ್ನು ಒಳಗೊಂಡಿದೆ; ಅದು ಸುಮ್ಮನೆ ಶೂನ್ಯವಾದ ಅಂತರಿಕ್ಷದ ಕಡೆಗೆ ನಿಶ್ಚಲವಾದ ಗಮನವನ್ನು ನೀಡುವುದಾಗಿದೆ. ಇದರ ಪೂರ್ವ ಸಿದ್ಧಾಂತವೇನೆಂದರೆ, ವಿಮೋಚನೆಯು ಗಮನ ಹರಿಸುವ ವಸ್ತುವಿನ ಮೇಲೆ ಆಧಾರವಾಗಿಲ್ಲ, ಆದರೆ ಗಮನದ ಮೇಲೆಯೇ ಆಧಾರವಾಗಿದೆ.

ಯೋಗದ ಇಡೀ ವ್ಯವಸ್ಥೆಯು ಯಾವುದೇ ನಿರ್ದಿಷ್ಟವಾದ ಉದ್ದೇಶ ಅಥವಾ ಪ್ರೇರಣೆ ಇಲ್ಲದೆಯೇ ಒಂದು ಗಾಢವಾದ ಒಳಗೊಳ್ಳುವಿಕೆಯ ಭಾವವನ್ನು ಪೋಷಿಸುವುದಾಗಿದೆ. ಕಾಲ ಸರಿದಂತೆ, ಇದನ್ನು ಉದಾಸೀನಭಾವವೆಂದು ಅಪಾರ್ಥಮಾಡಿಕೊಳ್ಳಲಾಯಿತು: ಜನರು ಒಳಗೊಳ್ಳುವಿಕೆಯನ್ನು ಸಿಕ್ಕಿಹಾಕಿಕೊಳ್ಳುವುದೆಂದೂ ಮತ್ತು ನಿಷ್ಪಕ್ಷಪಾತವನ್ನು ಪ್ರತ್ಯೇಕತೆ ಎಂದು ತಿಳಿದರು. ಶಂಕರನ್ ಪಿಳ್ಳೈ ಬಸ್ಸಿನಲ್ಲಿ ಕಂಡುಕೊಂಡಿದ್ದನ್ನು ಅವರು ಮರೆತಿದ್ದಾರೆ – ಏನೆಂದರೆ, ಒಬ್ಬರನ್ನು ಉದಾಸೀನ ಮಾಡುವುದಕ್ಕೂ ಕೂಡ ತುಂಬ ಒಳಗೊಳ್ಳುವಿಕೆಯು ಬೇಕಾಗುತ್ತದೆ ಎಂದು!

ನಿಮ್ಮನ್ನು ಮುಕ್ತಗೊಳಿಸುವುದು ಗುರಿಯಲ್ಲ, ಒಳಗೂಡಿಸಿಕೊಳ್ಳುವಿಕೆಯ ಪಯಣ. ಪ್ರತ್ಯೇಕಗೊಳಿಸುವಿಕೆಯಲ್ಲಿ, ನೀವು ಸಿಕ್ಕಿಕೊಳ್ಳುತ್ತೀರಿ. ಒಳಗೂಡಿಸಿಕೊಳ್ಳುವುದರಲ್ಲಿ, ನೀವು ಮುಕ್ತಿಯನ್ನು ಹೊಂದುತ್ತೀರಿ.

ಜೀವನವೇ ಒಂದು ಉದ್ದೇಶವಿಲ್ಲದ ಪ್ರಕ್ರಿಯೆಯಾಗಿರುವುದರಿಂದ, ಆ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದರಿಂದ ಮಾತ್ರ ಬದುಕಿನ ರುಚಿಯನ್ನು ಸವಿಯಬಹುದು. ಇಲ್ಲಿ ಪ್ರಕ್ರಿಯೆಯೇ ಉದ್ದೇಶ; ಗುರಿ ಕೇವಲ ಒಂದು ಫಲಿತಾಂಶವಷ್ಟೆ. ಮತ್ತು ಈ ವಿಷಯಗಳನ್ನು ಸರಳಗೊಳಿಸುವ ಸಲುವಾಗಿಯೇ ಬಹಳಷ್ಟು ಪುರಾತನ ಸಂಸ್ಕೃತಿಗಳು “ಭಕ್ತಿ”ಯ ಬಗ್ಗೆ ಮಾತನಾಡಿವೆ.


ಭಕ್ತಿಯ ಬಗ್ಗೆ ಯಾವ ಭಾವನಾತ್ಮಕತೆಯೂ ಇಲ್ಲ. ನೈಜವಾದ ಭಕ್ತಿಯ ಜ್ವಾಲೆ ನಿಮ್ಮೊಳಗೆ ಉರಿಯುತ್ತಿದ್ದರೆ, ಅದು ಎಲ್ಲವನ್ನೂ ಸುಟ್ಟುಹಾಕುತ್ತದೆ. ನೀವು ಗುರಿ ಏನೆಂಬ ಬಗ್ಗೆ ಚಿಂತಿಸದೆ, ಸಂಪೂರ್ಣವಾಗಿ ಪ್ರಕ್ರಿಯೆಗೆ ಸಮರ್ಪಿತರಾಗಿದ್ದೀರಿ ಎಂಬುದನ್ನು ಅದು ಖಚಿತಪಡಿಸುತ್ತದೆ. ನಿಮ್ಮನ್ನು ಮುಕ್ತಗೊಳಿಸುವುದು ಗುರಿಯಲ್ಲ, ಒಳಗೂಡಿಸಿಕೊಳ್ಳುವಿಕೆಯ ಪಯಣ. ಪ್ರತ್ಯೇಕಗೊಳಿಸುವಿಕೆಯಲ್ಲಿ, ನೀವು ಸಿಕ್ಕಿಕೊಳ್ಳುತ್ತೀರಿ. ಒಳಗೂಡಿಸಿಕೊಳ್ಳುವುದರಲ್ಲಿ, ನೀವು ಮುಕ್ತಿಯನ್ನು ಹೊಂದುತ್ತೀರಿ.
 

ಸಂಪಾದಕರ ಟಿಪ್ಪಣಿ: ಕರ್ಮವು ಹೇಗೆ ಬಹಳಷ್ಟು ಜನರ ಮಾಯೆಯಾಗಿದೆ ಎನ್ನುವುದರ ಬಗ್ಗೆ ಸದ್ಗುರುಗಳು ಗಮನವನ್ನು ಹರಿಸುತ್ತಾರೆ, ಮತ್ತು ಕ್ರಿಯೆಗಳು ಹಾಗೂ ಪ್ರಾಣಾಯಾಮಗಳು ಹೇಗೆ ಸೂಕ್ಷ್ಮ ಶರೀರಕ್ಕೆ ಬಲ ನೀಡುವ ಪ್ರಕ್ರಿಯೆಗಳಾಗಿವೆ ಹಾಗೂ ನಮ್ಮನ್ನು ನಾವು ಕರ್ಮದಿಂದ ದೂರಾಗಿಸಿಕೊಳ್ಳುವ ಬಗ್ಗೆ ವಿವರಿಸುತ್ತಾರೆ. ಲೇಖನವನ್ನು ಇಲ್ಲಿ ಓದಿ. Read the article.