ಸದ್ಗುರು: ಮನುಷ್ಯರನ್ನು ಹೆಚ್ಚಿನ ಸಾಧ್ಯತೆಗೆ ಬೆಳೆಯುವಂತೆ ಮಾಡಲು - ಜಲ, ವಾಯು, ಭೂಮಿ, ಅಗ್ನಿ ಮತ್ತು ಐದನೇ ಆಯಾಮ - ಅತ್ಯಂತ ದೊಡ್ಡದಾದ ಅಂತರಿಕ್ಷ ಅಥವಾ ಆಕಾಶವು ಹೇಗೆ ವರ್ತಿಸುತ್ತದೆ ಎನ್ನುವುದು ಬಹಳ ಮುಖ್ಯ. ಪಂಚಭೂತಗಳಲ್ಲಿ ಮೂಲ ಧಾತುವೆಂದರೆ ಅದು ಆಕಾಶ. ಅದನ್ನು ಐದನೇ ಧಾತು ಎಂದು ಕರೆಯುವುದು ಸೂಕ್ತವಲ್ಲ, ಏಕೆಂದರೆ ಅದೇ ಉಳಿದೆಲ್ಲದುದರ ಮೂಲಾಂಶ. ಉಳಿದ ನಾಲ್ಕೂ ಧಾತುಗಳು ಅದರೊಳಗೆ  ಆಡುತ್ತವೆಯಷ್ಟೆ.

ಇಂದು, ಆಧುನಿಕ ವಿಜ್ಞಾನವು ಆಕಾಶ ಪ್ರಜ್ಞೆ ಎನ್ನುವುದೊಂದಿದೆ ಎಂಬುದನ್ನು ಗುರುತಿಸುತ್ತಿದೆ. ಅಂದರೆ, ಶೂನ್ಯಾಕಾಶವು ಒಂದು ನಿರ್ದಿಷ್ಟವಾದ ಬುದ್ಧಿವಂತಿಕೆಯನ್ನು ಹೊಂದಿದೆ. ಈ ಬುದ್ಧಿವಂತಿಕೆಯು ನಿಮ್ಮ ಪರವಾಗಿ ಅಥವಾ ನಿಮ್ಮ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತದೆಯೋ ಎನ್ನುವುದು ನಿಮ್ಮ ಜೀವನದ ಸ್ವರೂಪವನ್ನು ನಿರ್ಧರಿಸುತ್ತದೆ, ಮತ್ತು ನೀವೊಬ್ಬ ಆಶೀರ್ವದಿಸಿಲ್ಪಟ್ಟ ಜೀವಿಯೋ ಅಥವಾ ಜೀವನದುದ್ದಕ್ಕೂ ಅದರಿಂದ ಸದೆಬಡಿಸಿಕೊಳ್ಳುವ ವ್ಯಕ್ತಿಯೋ ಎನ್ನುವುದನ್ನು ಅದು ನಿರ್ಣಯಿಸುತ್ತದೆ. ಯಾವುದೇ ಕಾರಣವಿಲ್ಲದೆ, ಕೆಲವು ಜನ ಜೀವನದಿಂದ ಪೆಟ್ಟು ತಿನ್ನುತ್ತಿರುತ್ತಾರೆ, ಅಲ್ಲವೇ? ಮತ್ತು ಯಾವುದೇ ಕಾರಣವಿರದೆ ಕೆಲವರು ಎಲ್ಲಾ ವಿಷಯದಲ್ಲೂ ಆಶೀರ್ವದಿಸಲ್ಪಟ್ಟವರಂತೆ ತೋರುತ್ತಾರೆ. ಅದು ಯಾವುದೇ ಕಾರಣವಿರದೇ ಅಲ್ಲ. ಅಸ್ತಿತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಆ ಅಗಾಧವಾದ ಬುದ್ಧಿವಂತಿಕೆಯ ಸಹಕಾರವನ್ನು ನಿಮಗೆ ತಿಳಿದೋ ತಿಳಿಯದೆಯೋ ಪಡೆಯುವ ನಿಮ್ಮ ಸಾಮರ್ಥ್ಯದ ಕಾರಣದಿಂದಾಗಿದೆ.

ಸಂಪಾದಕರ ಟಿಪ್ಪಣಿ: ಸದ್ಗುರುಗಳು ಆಕಾಶೀಯ ದಾಖಲೆಗಳ ಬಗ್ಗೆ ಮಾತನಾಡುತ್ತಾರೆ ಮತ್ತು ಅದು ಅಭೌತಿಕವಾದ ಆಯಾಮದಲ್ಲಿರುವ ಜ್ಞಾನದ ಅನಂತವಾದ ಭಂಡಾರಕ್ಕೆ ಪ್ರವೇಶವನ್ನು ಪಡೆಯುವ ಮಾರ್ಗವಾಗಿದೆ ಎಂದವರು ವಿವರಿಸುತ್ತಾರೆ.

Akash: space, sky

Sky To Space - Andres Rueda@Flickr

Editor’s Note: Excerpted from Sadhguru’s discourse at the Isha Hatha Yoga School’s 21-week Hatha Yoga Teacher Training program. The program offers an unparalleled opportunity to acquire a profound understanding of the yogic system and the proficiency to teach Hatha Yoga. The next 21-week session begins on July 16 to Dec 11, 2019. For more information, visit www.ishahathayoga.com or mail info@ishahatayoga.com