ರೆಜೀನಾ: ನನ್ನ ಹದಿಹರೆಯದಲ್ಲಿ, ನನ್ನ ಬಗ್ಗೆ, ನನ್ನ ಸಾಮರ್ಥ್ಯ ಹಾಗೂ ಕ್ಷಮತೆಯ ಬಗ್ಗೆ ನನ್ನಲ್ಲಿ ಅನೇಕ ಪ್ರಶ್ನೆಗಳಿದ್ದವು. ಆತ್ಮಸಂಶಯವೆನ್ನುವುದು, ನಾನು ಮತ್ತು ಅನೇಕ ಮಕ್ಕಳು, ಎದುರಿಸಿ, ಮಣಿಸಬೇಕಾದ ಒಂದು ದೊಡ್ಡ ವಿಷಯವಾಗಿತ್ತು. ಯುವಜನರು ಆತ್ಮಸಂಶಯದಿ೦ದ ಹೊರಬರುವುದು ಹೇಗೆ? 

ಸದ್ಗುರು: ನಮಸ್ಕಾರಮ್ ರೆಜೀನಾ! ನಿಮ್ಮನ್ನು ನೀವು ಸಂಶಯಪಡುವುದು ಒಳ್ಳೆಯದೇ. ಎಲ್ಲರೂ "ನಿಮ್ಮಲ್ಲಿ ನೀವು ನಂಬಿಕೆ ಇಡಿ” ಎಂದು ಹೇಳುತ್ತಾರೆಂದು ನನಗೆ ಗೊತ್ತು. ನಾನು ಹೇಳುತ್ತೇನೆ, “ದಯವಿಟ್ಟು, ನಿಮ್ಮ ಬಗ್ಗೆ ನೀವು ಸಂಶಯವನ್ನು ಇಟ್ಟುಕೊಳ್ಳಿ" ಎಂದು. ಯಾವ ಕೆಲಸವಾದರು ಸರಿಯಾಗಿ ಅಥವಾ ತಪ್ಪಾಗಿ ನಡೆದರೆ, ಮೊದಲು ಅದು ನಿಮ್ಮಿಂದಾಗಿರಬಹುದೇ ಎಂದು ನೋಡಿ. ಇಲ್ಲವಾದಲ್ಲಿ, ಬೇರೆಯವರಿಂದಾಗಿರಬಹುದೇ ಎಂಬುದನ್ನು ನೋಡಿ. ಆತ್ಮವಿಶ್ವಾಸವನ್ನು ಹೊ೦ದಿರುವ ಮೂರ್ಖರು ಎಲ್ಲರನ್ನು ತುಳಿಯುತ್ತಾ ನಡೆಯುತ್ತಿದ್ದಾರೆ. ಸಂಶಯವೆನ್ನುವುದು ನಿಮ್ಮಲ್ಲಿ ವಿವೇಚನೆಯನ್ನು ತರುತ್ತದೆ. ನೀವು ಭೂಮಿಯ ಮೇಲೆ ಸೌಮ್ಯವಾಗಿ ಬಾಳುತ್ತೀರಿ.

ಹದಿಹರೆಯದ ಯಾತನೆಗಳು!

ನಾವು ಬೆಳೆಯುತ್ತಿದ್ದೇವೆ ಎ೦ದಾಗ, ಒಬ್ಬ ಮನುಷ್ಯನಿಗೆ ಹಲವಾರು ಆಯಾಮಗಳಿರುತ್ತವೆ – ಭೌತಿಕ, ಮಾನಸಿಕ, ಭಾವನಾತ್ಮಕ ಮತ್ತು ಇನ್ನೂ ಬೇರೆ ಬೇರೆ ರೀತಿಯ ಆಯಾಮಗಳಿವೆ. ಬಹಳಷ್ಟು ಬಾರಿ, ನಾವು ಬೆಳವಣಿಗೆಯನ್ನು ಶಾರೀರಿಕವಾಗಿ ಅಳೆಯುತ್ತೇವೆ, ನಂತರದ ಸಾಧ್ಯತೆಯೆಂದರೆ, ಮಾನಸಿಕವಾಗಿ ಅಳೆಯಬಹುದು. ಜೀವನದ ಸನ್ನಿವೇಶಗಳು ನಮಗೆ ಸವಾಲೊಡ್ಡಿದಾಗ ಮಾತ್ರ ನಾವು ಜೀವನದ ಬೇರೆ ಆಯಾಮಗಳನ್ನು ಮನಗಾಣುತ್ತೇವೆ. ಜೀವನವು ನಮ್ಮೆಡೆಗೆ ಅತ್ಯಂತ ಕಷ್ಟಕರವಾದ ಪರಿಸ್ಥಿತಿಗಳನ್ನು ಎಸೆದಾಗ ಮಾತ್ರ, ನಮ್ಮ ಭಾವನಾತ್ಮಕ ಮತ್ತು ಚೈತನ್ಯದ ಬೆಳವಣಿಗೆಯ ಮಟ್ಟವನ್ನು ಹಾಗೂ ಒಬ್ಬ ಮಾನವನಾಗಿ ನಮ್ಮ ಬೆಳವಣಿಗೆಯ ಮಟ್ಟವನ್ನೂ ಅರ್ಥ ಮಾಡಿಕೊಳ್ಳುತ್ತೇವೆ. ಹೆಚ್ಚಿನ ಮನುಷ್ಯರು ಜೀವನದ ಪರಿಸ್ಥಿತಿಗಳಿಗೆ ತಮ್ಮದೇ ಸ್ವ೦ತ ಪ್ರತಿಕ್ರಿಯೆಗಳನ್ನು ಕಂಡು ಚಕಿತಗೊಳ್ಳುತ್ತಾರೆ.  

ಮನುಷ್ಯರಿಗೆ ಬೆಳವಣಿಗೆಯು ಯಾತನಾಮಯವಾಗಿದ್ದರೆ, ಅದರ ಮುಖ್ಯ ಕಾರಣ, ಅವರ ಮಾನಸಿಕ ಬೆಳವಣಿಗೆಯು ಅವರ ಶಾರೀರಿಕ ಬೆಳವಣಿಗೆಗಿಂತ ಕನಿಷ್ಟಪಕ್ಷ ಒಂದು ಹೆಜ್ಜೆಯಷ್ಟಾದರೂ ಮುಂದಿಲ್ಲದೆ ಇರುವುದು.

ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಯ ವಿಷಯದಲ್ಲಿ, ಶರೀರವು ಒಂದು ಪ್ರತ್ಯಕ್ಷವಾದ ಅ೦ಶವಾಗಿರುವುದರಿಂದ, ಅದು ಒ೦ದು ನಿಶ್ಚಿತವಾದ ಗತಿಯಲ್ಲಿ ಬೆಳೆಯುತ್ತದೆ. ಆದರೆ, ನೀವು ಯಾರೆ೦ಬ ಮಾನಸಿಕ ಆಯಾಮವು ಅಷ್ಟೊ೦ದು ಪ್ರಾತ್ಯಕ್ಷಿಕವಾದ ಪ್ರಕ್ರಿಯೆಯಲ್ಲ. ಅದು ಹೆಚ್ಚು ಸುಲಭವಾಗಿ ಬಾಗುವ, ಚಲಿಸುವ ಮತ್ತು ಅಸ್ಪಷ್ಟವಾದುದ್ದಾಗಿದೆ. ಆದ್ದರಿ೦ದ, ಅದು ನಿಮ್ಮ ಶಾರೀರಿಕ ಬೆಳವಣಿಗೆಗಿಂತ ಮುಂಚಿತವಾಗಿಯೇ ಬೆಳೆಯುಲು ಸಾಧ್ಯವಿರುತ್ತದೆ. ಮನುಷ್ಯರಿಗೆ ಬೆಳವಣಿಗೆಯು ಯಾತನಾಮಯವಾಗಿದ್ದರೆ, ಅದರ ಮುಖ್ಯ ಕಾರಣ, ಅವರ ಮಾನಸಿಕ ಬೆಳವಣಿಗೆಯು ಅವರ ಶಾರೀರಿಕ ಬೆಳವಣಿಗೆಗಿಂತ ಕನಿಷ್ಟಪಕ್ಷ ಒಂದು ಹೆಜ್ಜೆಯಷ್ಟಾದರೂ ಮುಂದಿಲ್ಲದೆ ಇರುವುದು. 


ಇಂತಹ ಸಂಗತಿಗಳು ಭೂಮಿಯ ಮೇಲೆ ಕೋಟ್ಯಾ೦ತರ ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದರೂ, ನಮಗೆ ಇದು ಜಗತ್ತಿನಲ್ಲಿ ಮೊದಲ ಬಾರಿ ನಡೆಯುತ್ತಿದೆಯೇನೊ ಎಂದು ತೋರುತ್ತದೆ. ಹಾಗಾಗಿ ಜನರು ಆಶ್ಚರ್ಯ ಮತ್ತು ಗಾಬರಿಯನ್ನು ವ್ಯಕ್ತಪಡಿಸುತ್ತಾರೆ. ಇದಕ್ಕೆ ಕಾರಣ, ಅವರ ಮಾನಸಿಕ ಬೆಳವಣಿಗೆಯು ಅವರ ಶಾರೀರಿಕ ಬೆಳವಣಿಗೆಗಿಂತ ಹಿಂದುಳಿದಿರುವುದೇ ಆಗಿದೆ. 
 

ಒ೦ದು ಸಮಾಜದಲ್ಲಿ ಪ್ರತಿಯೊಂದು ಮಗುವೂ ಕೂಡ ತನ್ನ ಶಾರೀರಿಕ ಬೆಳವಣಿಗೆಗಿಂತ, ಮಾನಸಿಕ ಬೆಳವಣಿಗೆಯಲ್ಲಿ ಕನಿಷ್ಟ ಒಂದು ಹೆಜ್ಜೆಯಾದರೂ ಮುಂದಿರುವ೦ತಹ ಪರಿಸ್ಥಿತಿಯನ್ನು ನಾವು ಸೃಷ್ಟಿಸುವುದು ಬಹಳ ಮುಖ್ಯ.

ಒ೦ದು ಸಮಾಜದಲ್ಲಿ ಪ್ರತಿಯೊಂದು ಮಗುವೂ ಕೂಡ ತನ್ನ ಶಾರೀರಿಕ ಬೆಳವಣಿಗೆಗಿಂತ, ಮಾನಸಿಕ ಬೆಳವಣಿಗೆಯಲ್ಲಿ ಕನಿಷ್ಟ ಒಂದು ಹೆಜ್ಜೆಯಾದರೂ ಮುಂದಿರುವ೦ತಹ ಪರಿಸ್ಥಿತಿಯನ್ನು ನಾವು ಸೃಷ್ಟಿಸುವುದು ಬಹಳ ಮುಖ್ಯ. ಇದೊಂದನ್ನು ನೀವು ಮಾಡಿದಾಗ, ನೀವು ನೋಡುವಿರಿ – ಹದಿಹರೆಯವಿರಬಹುದು, ಮಧ್ಯವಯಸ್ಸಿರಬಹುದು ಅಥವಾ ವಯಸ್ಸಾದಮೇಲಿರಬಹುದು, ನಿಮಗೆ ಯಾವುದೂ ಸಹ ವಿಸ್ಮಯವೆನಿಸುವುದಿಲ್ಲ. ನಿಮಗೆ ಅದರೊ೦ದಿಗೆ ಹೇಗೆ ವ್ಯವಹರಿಸಬೇಕು ಮತ್ತದನ್ನು ಹೇಗೆ ನಿಭಾಯಿಸಬೇಕೆಂದು ತಿಳಿದಿರುತ್ತದೆ. ಸರಳವಾದ ಪ್ರಕ್ರಿಯೆಗಳಿ೦ದಾಗಿ ನಿಮ್ಮ ಜೀವನದಲ್ಲಿ ಯಾವುದೇ ಅಂಜಿಕೆ ಮತ್ತು ಭಾರಿ ಬದಲಾವಣೆಗಳು ಆಗುವುದಿಲ್ಲ.

ಜೀವನವು ಒ೦ದು ಸಮಸ್ಯೆಯಲ್ಲ. ಜೀವನವೊಂದು ನಿರ್ದಿಷ್ಟವಾದ ಪ್ರಕ್ರಿಯೆ. ನೀವು ಜೀವನದ ಪ್ರಕ್ರಿಯೆಗೆ ಸಿದ್ಧವಾಗಿರುವಿರೋ ಇಲ್ಲವೋ ಎಂಬುದೇ ಪ್ರಶ್ನೆ.

ಈಗಿನ ಕಾಲದಲ್ಲಿ, ಜನರು ಹೇಗೆ ಬದುಕುತ್ತಿದ್ದಾರೆ೦ದರೆ, ಮಕ್ಕಳಿಗೆ ಡೈಪರ್ ಸಮಸ್ಯೆಗಳು, ಹದಿಹರೆಯದವರಿಗೆ ಹಾರ್ಮೋನ್ ಸಮಸ್ಯೆಗಳು, ಮಧ್ಯವಯಸ್ಸಿನವರಿಗೆ ಮಧ್ಯ-ಜೀವನದ ಬಿಕ್ಕಟ್ಟುಗಳು ಮತ್ತು ಇಳಿವಯಸ್ಸಿನಲ್ಲಿ ಜನರು ಹೇಗಿದ್ದರೂ ನರಳುತ್ತಲೇ ಇದ್ದಾರೆ. ಜನರು ’ಸಮಸ್ಯೆ’ ಎ೦ದು ಪರಿಗಣಿಸಿಲ್ಲದಿರುವ ಜೀವನದ ಯಾವುದಾದರೂ ಒ೦ದೇ ಒ೦ದು ಆಯಾಮವನ್ನು ನನಗೆ ಹೇಳಿ ನೋಡೋಣ! ಜೀವನವು ಒ೦ದು ಸಮಸ್ಯೆಯಲ್ಲ. ಜೀವನವೊಂದು ನಿರ್ದಿಷ್ಟವಾದ ಪ್ರಕ್ರಿಯೆ. ನೀವು ಜೀವನದ ಪ್ರಕ್ರಿಯೆಗೆ ಸಿದ್ಧವಾಗಿರುವಿರೋ ಇಲ್ಲವೋ ಎಂಬುದೇ ಪ್ರಶ್ನೆ.

ಸಂಪಾದಕರ ಟಿಪ್ಪಣಿ: ನೀವು ಯಾವುದಾದರೂ ವಿವಾದಾತ್ಮಕ ಪ್ರಶ್ನೆಯೊ೦ದರ ಜೊತೆ ಸೆಣಸಾಡುತ್ತಿದ್ದರೆ, ನಿಷೇಧಿತ ವಿಷಯವೊ೦ದು ಒಗಟಿನ೦ತೆ ಗೊ೦ದಲಮಯವಾಗಿದ್ದರೆ ಅಥವಾ ಯಾರೂ ಉತ್ತರಿಸಲು ಬಯಸದ ಪ್ರಶ್ನೆಯೊ೦ದು ನಿಮ್ಮನ್ನು ಕಾಡುತ್ತಿದ್ದರೆ ಆ ಪ್ರಶ್ನೆಯನ್ನು ಕೇಳಲು ಇದೇ ಅವಕಾಶ. ನಿಮ್ಮ ಪ್ರಶ್ನೆಗಳನ್ನು ಸದ್ಗುರುಗಳ ಬಳಿ ಇಲ್ಲಿ ಕೇಳಿ UnplugWithSadhguru.org.

Youth and Truth Banner Image