ಪ್ರಶ್ನೆ: ವಸ್ತುಗಳನ್ನು ಶಕ್ತಿಯುತಗೊಳಿಸುವುದು ಮತ್ತು ಸ್ಥಳಗಳನ್ನು ಪ್ರಾಣ ಪ್ರತಿಷ್ಠಾಪಿಸುವುದು ಹೇಗೆಂದು ನಿಮಗೆ ಹೇಗೆ ತಿಳಿದಿದೆಯೆಂದು ವಿವರಿಸುತ್ತೀರ? ಹುಟ್ಟಿನಿಂದಲೇ ನಿಮಗೆ ಈ ಸಾಮರ್ಥ್ಯವಿದೆಯೇ ಅಥವಾ ನೀವು ಇದನ್ನು ಕಾಲಕ್ರಮೇಣ ಕಲಿತಿದ್ದಾ? ನಾನು ಸಹ ಇದನ್ನು ಕಲಿಯಬಹುದೇ?

ಸದ್ಗುರು: ನಿಮ್ಮನ್ನು ನೀವು ನಿಧಾನವಾಗಿ ಪ್ರಾಣ ಪ್ರತಿಷ್ಠಾಪಿಸಿಕೊಳ್ಳುವ ವಿಧಾನವನ್ನೇ ನಾವು ನಮ್ಮ ಕ್ರಮವಿಧಿಗಳಲ್ಲಿ ನಿಮಗೆ ಕಲಿಸುತ್ತಿರುವುದು. ಮೊದಲು ನಿಮ್ಮನ್ನು ನೀವು ಪವಿತ್ರೀಕರಿಸಿಕೊಳ್ಳದಿದ್ದರೆ, ನೀವು ಬೇರೆಯದನ್ನು ಹೇಗೆ ಪವಿತ್ರೀಕರಿಸುವಿರಿ? ನೀವು ಜೀವನದಲ್ಲಿ ಏನೇ ಮಾಡಲು ಇಚ್ಛಿಸಿದರೆ, ನೀವಲ್ಲದಿರುವದನ್ನು ಮಾಡಲಾರಿರಿ. ನೀವು ಸೋಗು ಹಾಕಬಹುದು, ಆದರೆ ಅದು ಕೆಲಸ ಮಾಡುವುದಿಲ್ಲ. ನಿಮಗೆ ಏನನ್ನಾದರೂ ಯಾರಿಗಾದರೂ ಪ್ರಸಾರಣ ಮಾಡಬೇಕಿದ್ದಲ್ಲಿ, ಮೊದಲಿಗೆ ಅದು ನಿಮ್ಮಲ್ಲಿ ನಡೆಯಬೇಕು. ನಿಮ್ಮೊಳಗೆ ನಡೆಯದೆ ಇದ್ದದ್ದನ್ನು ನಿಮಗೆ ಬೇರೆಯವರಲ್ಲಿ ಮಾಡಲು ಸಾಧ್ಯವಿಲ್ಲ. ಸಾಧನೆಯಲ್ಲಿ ತೊಡಗಿರುವವರು ಒಂದು ವೇಳೆ ಪ್ರಕ್ಷುಬ್ಧ ಸ್ಥಿತಿಯಲ್ಲಿದ್ದರೆ, ಅವರ ಆಂತರಿಕ ಅವ್ಯವಸ್ಥೆಯು ಪ್ರಪಂಚದಲ್ಲಿ ಹರಡಬಾರದು ಎನ್ನುವ ಕಾರಣದಿಂದ ಈ ಸಂಸ್ಕೃತಿಯಲ್ಲಿ ಅವರಿಗೆ ಜಗತ್ತಿನಿಂದ ದೂರ ಸರಿಯುವಂತೆ ಹೇಳಲಾಗುತ್ತಿತ್ತು.

ಮೊದಲನೆಯದಾಗಿ, ನೀವು ಪ್ರಾಣ ಪ್ರತಿಷ್ಠಾಪಿತರಾಗಬೇಕು. ಒಂದು ರೀತಿಯಲ್ಲಿ, ರೂಪಗಳು ಅಥವಾ ಸ್ಥಳಗಳನ್ನು ಪ್ರತಿಷ್ಠೀಕರಿಸುವುದು ಅತ್ಯುತ್ತಮವಾದ ವಿಷಯವೇನಲ್ಲ. ಜನರನ್ನು ಪ್ರಾಣ ಪ್ರತಿಷ್ಠಾಪಿತಗೊಳಿಸುವುದು ಸುಲಭ ಹಾಗೂ ಉತ್ತಮ - 98% ದಷ್ಟು ಜನರು ತಮ್ಮ ಆದ್ಯತೆಯನ್ನು ಪ್ರತಿ ಕೆಲಕ್ಷಣಗಳಿಗೊಮ್ಮೆ ಬದಲಾಯಿಸದಿದ್ದರೆ ಮಾತ್ರ ಇದು ಸಾಧ್ಯವಾಗುತ್ತದೆ. ಯಾರು ನಿರಂತರವಾಗಿ ತಮ್ಮ ಆದ್ಯತೆಗಳನ್ನು ಬದಲಾಯಿಸುತ್ತಿರುತ್ತಾರೋ, ಸಹಜವಾಗಿಯೇ ಅವರಿಗೆ ಯಾವ ಗುರಿಯನ್ನೂ ಮುಟ್ಟುವ  ಉದ್ದೇಶವಿರುವುದಿಲ್ಲ. ನೀವೀಗ ಈಶ ಯೋಗ ಕೇಂದ್ರದಲ್ಲಿದ್ದೀರ. ಇಲ್ಲಿ ನಿಮಗೇ ತಿಳಿಯದಂತೆ ಆದಿಯೋಗಿಯು ನಿಮ್ಮೊಳಗೆ ಸೇರುತ್ತಾನೆ. ಇಂದು ನೀವು ಸ್ಥಳಗಳ ಪ್ರಾಣ ಪ್ರತಿಷ್ಠಾಪನೆಯ ಕುರಿತು ಮಾತನಾಡುತ್ತಿದ್ದೀರಿ. ಈ ಉದ್ದೇಶವನ್ನು ದೀರ್ಘಕಾಲದವರೆಗೆ ನೀವು ಕಾಪಾಡಿಕೊಳ್ಳುವಿರೇ ಎಂದು ನೋಡೋಣ. ನಿಮಗೆ ಏನನ್ನಾದರೂ ಪವಿತ್ರೀಕರಿಸಬೇಕಿದ್ದರೆ, ಮೊದಲು ನೀವೊಂದು ಜೀವಂತ ದೇವಾಲಯವಾಗಬೇಕು.